ಹೊಸದಿಗಂತ ಡಿಜಿಟಲ್ ಡೆಸ್ಕ್:
ಅದೃಷ್ಟಕೆಟ್ಟರೆ ಮನೆಯಲ್ಲಿರುವ, ದಿನಕ್ಕೆ ಹತ್ತಾರು ಬಾರಿ ಮುಟ್ಟುವ ಫ್ರಿಡ್ಜ್ ಜೀವಕ್ಕೇ ಮುಳುವಾಗುತ್ತದೆ. ಹೌದು, ಉತ್ತರ ಪ್ರದೇಶದ ಡಿಯೋರಿಯಾ ಜಿಲ್ಲೆಯಲ್ಲಿ ಫ್ರಿಡ್ಜ್‌ನಿಂದ ಕರೆಂಟ್ ಶಾಕ್ ಹೊಡೆದಿದ್ದು, ತಾಯಿ ಮಗಳು ಮೃತಪಟ್ಟಿದ್ದಾರೆ.
55 ವರ್ಷದ ಶೈದಾ ಅವರು ಫ್ರಿಡ್ಜ್ನಲ್ಲಿಟ್ಟಿದ್ದ ಮಾವಿನ ಹಣ್ಣು ಹೊರತೆಗೆಯಲು ಹೋಗಿದ್ದರು. ಆಗ ವಿದ್ಯುತ್ ಶಾಕ್ ಹೊಡೆದಿದೆ. ಇದನ್ನು ಗಮನಿಸಿದ ಮಗಳು ಅಮ್ಮನ ರಕ್ಷಣೆಗೆ ಓಡಿ ಬಂದಿದ್ದಾಳೆ. ಈ ವೇಳೆ ಆಕೆಯೂ ವಿದ್ಯುತ್ ಶಾಕ್ ಹೊಡೆದಿದ್ದು, ಮಗಳು ಅಫ್ಸನಾ ಕಾತೂನ್ ಕೂಡ ಸಾವನ್ನಪ್ಪಿದ್ದಾಳೆ ಎಂದು ವರದಿಯಾಗಿದೆ.
ಮೃತ ವ್ಯಕ್ತಿಯ ಮನೆಯಲ್ಲಿ ಮದುವೆ ಸಮಾರಂಭ ಇತ್ತು. ತಂಗಿಯ ಮದುವೆಯಲ್ಲಿ ಭಾಗಿಯಾಗಲು ತಾಯಿ ಮನೆಗೆ ಅಫ್ಸನಾ ಬಂದಿದ್ದಳು. ಬುಧವಾರ ನಡೆದ ಘಟನೆಯಲ್ಲಿ ತಾಯಿ ಮಗಳು ಮೃತಪಟ್ಟಿದ್ದಾರೆ. ಪೊಲೀಸರು ವಿಚಾರಣೆ ನಡೆಸಿದ್ದಾರೆ.