ಹೊಸದಿಗಂತ ವರದಿ, ರಾಮನಗರ :
ಜಮೀನಿಗೆ ತೆರಳುತ್ತಿದ್ದ ರೈತನ ಮೇಲೆ ಕರಡಿ ದಾಳಿ ನಡೆಸಿದ್ದರಿಂದ ರೈತ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಾಗಡಿ ತಾಲ್ಲೂಕಿನ ಚಕ್ಕಳ್ಳಿ ಗ್ರಾಮದ ಟಿ.ಎನ್. ಕೆರೆ ಬಳಿ ನಡೆದಿದೆ.
ಮಹೇಂದ್ರ (45) ಕರಡಿ ದಾಳಿಯಲ್ಲಿ ಗಾಯಗೊಂಡವರು. ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಬೆಳಿಗ್ಗೆ ಎಂದಿನಂತೆ ಜಮೀನಿಗೆ ತೆರಳುವಾಗ ಏಕಾಏಕಿ ದಾಳಿ ಮಾಡಿದೆ .
ತಲೆ ಭಾಗವನ್ನು ಕಚ್ಚಿ ಗಾಯಗೊಳಿಸಿದೆ. ತಲೆಯ ಮೇಲ್ಪದರ ಕೂದಲು ಸಮೇತ ಕಿತ್ತು ಹೋಗಿದೆ ಎಂದು ಕುದೂರು ಠಾಣೆ ಪೊಲೀಸರು ತಿಳಿಸಿದ್ದಾರೆ.
ಸ್ಥಳಕ್ಕೆ ತಾಲ್ಲೂಕು ಅರಣ್ಯಾಧಿಕಾರಿ ಚೈತ್ರ ಭೇಟಿ ನೀಡಿ ಪರಿಶೀಲನೆ ನಡೆಸಿದರು.