ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಅಮಾವಾಸ್ಯೆಯ ದಿನ, ಈ ದಿನದಂದು ಕೆಲ ವಿಷಯಗಳ ಬಗ್ಗೆ ಗಮನಹರಿಸಬೇಕಾಗುತ್ತದೆ.ಪಿತ್ರುದೋಶ ಪರಿಹಾರ ಮಾಡಬೇಕಾದರೆ ಇಂದು ದಾನ ಮಾಡಬೇಕು ಎಂದು ಹೇಳಲಾಗುತ್ತದೆ.
ಗರುಡ ಪುರಾಣದ ಪ್ರಕಾರ, ಅಮವಾಸ್ಯೆಯ ತಿಥಿಯಂದು ಪೂರ್ವಜರಿಗೆ ನೈವೇದ್ಯವನ್ನು ಅರ್ಪಿಸುವುದರಿಂದ, ವ್ಯಕ್ತಿಯು ಜೀವನದಲ್ಲಿ ಎಲ್ಲಾ ರೀತಿಯ ತೊಂದರೆಗಳಿಂದ ಪರಿಹಾರವನ್ನು ಪಡೆಯುತ್ತಾನೆ. ಇದರೊಂದಿಗೆ ಮನೆಗೆ ಸಂತೋಷ, ಸಮೃದ್ಧಿ ಮತ್ತು ಐಶ್ವರ್ಯ ಬರುತ್ತದೆ.
ಸನಾತನ ಧರ್ಮದಲ್ಲಿ, ಅಮವಾಸ್ಯೆಯ ದಿನದಂದು ದಾನಕ್ಕೆ ವಿಶೇಷ ಮಹತ್ವವಿದೆ. ಇದಕ್ಕಾಗಿ ಆಷಾಢ ಅಮಾವಾಸ್ಯೆಯಂದು ಪೂಜೆ, ಜಪ, ಪ್ರಾಯಶ್ಚಿತ್ತ ಮಾಡಿದ ನಂತರ ನಿಮ್ಮ ಆರ್ಥಿಕ ಸ್ಥಿತಿಗೆ ತಕ್ಕಂತೆ ದಾನ ಮಾಡಿ. ಈ ಪರಿಹಾರವನ್ನು ಮಾಡುವುದರಿಂದ ಪೂರ್ವಜರು ಸಂತುಷ್ಟರಾಗುತ್ತಾರೆ. ಅಕ್ಕಿ, ಉಪ್ಪು, ಗೋಧಿ, ಹಾಲು, ಮೊಸರು, ಕಪ್ಪು ಎಳ್ಳು, ಬಟ್ಟೆ ಇತ್ಯಾದಿಗಳನ್ನು ನೀವು ದಾನ ಮಾಡಬಹುದು. ಇದು ಜೀವನದಲ್ಲಿನ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ ಮತ್ತು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಇರುತ್ತದೆ.
ಇಂದು ಮನೆಯನ್ನು ಶುಚಿಗೊಳಿಸಿ, ಸ್ನಾನ ಮಾಡಿ, ಪೂಜೆ ನೆರವೇರಿಸಿ, ದೇವಸ್ಥಾನಗಳಿಗೆ ತೆರಳಿ ದಾನ ಮಾಡಬೇಕು, ಜತೆಗೆ ಮನೆಯಲ್ಲಿ ಯಾವುದೇ ರೀತಿ ಮಾಂಸಾಹಾರಗಳನ್ನು ಇಟ್ಟುಕೊಳ್ಳಬಾರದು ಎನ್ನಲಾಗುತ್ತದೆ.