HEALTH | ಎಲ್ಲಾ ಕಡೆ ಡೆಂಗ್ಯೂ, ಮಕ್ಕಳನ್ನು ಸೊಳ್ಳೆ ಕಾಟದಿಂದ ಹೀಗೆ ರಕ್ಷಿಸಿ..

ರಾಜ್ಯದಲ್ಲಿ ಡೆಂಗ್ಯೂ ಸಮಸ್ಯೆಯಿಂದ ಸಾಕಷ್ಟು ಮಕ್ಕಳು ಮೃತಪಟ್ಟಿದ್ದಾರೆ. ಇನ್ನು ಜ್ವರದಿಂದ ಸಾಕಷ್ಟು ಮಕ್ಕಳು ವೀಕ್‌ ಆಗಿದ್ದಾರೆ. ನಿಮ್ಮ ಮನೆಯ ಕಣ್ಮಣಿಗಳಿಗೆ ಯಾವುದೇ ರೀತಿಯ ಸಮಸ್ಯೆ ಆಗಬಾರದು ಎಂದರೆ ಅವರನ್ನು ಈ ಡೆಡ್ಲಿ ಸೊಳ್ಳೆಗಳಿಂದ ರಕ್ಷಿಸಿ.. ಹೇಗೆ ಅಂತೀರಾ? ಸಂಪೂರ್ಣವಾಗಿ ಓದಿ..

ಮಕ್ಕಳನ್ನು ಸಫೋಕೇಟ್‌ ಮಾಡುವಷ್ಟು ಲೇಯರ್ಸ್‌ ಬಟ್ಟೆ ಅಲ್ಲ, ಆದರೆ ಸ್ಲೀವ್‌ಲೆಸ್‌, ಶಾರ್ಸ್ಟ್‌, ಮಿಡಿ, ಫ್ರಾಕ್ಸ್‌, ಚಡ್ಡಿ ಬದಲು, ಫುಲ್‌ ಪ್ಯಾಂಟ್‌ ಹಾಗೂ ಫುಲ್‌ ಸ್ಲೀವ್ಸ್‌ ಟೀ ಶರ್ಟ್‌ ಹಾಕಿ. ಸಂಜೆ ಸೊಳ್ಳೆಗಳು ಆಕ್ಟೀವ್‌ ಆಗೋ ವೇಳೆಗೆ ಮಕ್ಕಳು ಮನೆಯಲ್ಲಿ ಇರಲಿ.

ಸಂಜೆ ನಾಲ್ಕು ಆಗುತ್ತಿದ್ದಂತೆಯೇ ಮುಂಜಾಗ್ರತಾ ಕ್ರಮವಾಗಿ ಕಿಟಕಿ, ಬಾಗಿಲುಗಳನ್ನು ಹಾಕಿಬಿಡಿ, ಕಿಟಕಿ ಹಾಗೂ ಬಾಗಿಲುಗಳಿಗೆ ಮೆಶ್‌ ಹಾಕಿಸಿ

ಮಕ್ಕಳಿಗೆ ಎಫೆಕ್ಟ್‌ ಆಗದಂಥ, ನ್ಯಾಚುರಲ್‌ ಉತ್ಪನ್ನಗಳನ್ನು ಬಳಸಿ ಮಾಡಿರುವ ಕ್ರೀಂ ಹಚ್ಚಿ, ಸೊಳ್ಳೆ ಬತ್ತಿ, ಕಾಯಿಲ್‌ ಹಾಕಿ.

ರಾತ್ರಿ ಮಲಗುವ ವೇಳೆ ಮಕ್ಕಳಿಗೆ ತೆಳುವಾದ ಹೊದಿಕೆ ಹೊದಿಸಿ, ಸೊಳ್ಳೆ ಪರದೆ ತಪ್ಪದೇ ಹಾಕಿ. ಇದು ಮಕ್ಕಳನ್ನು ಸೊಳ್ಳೆಗಳಿಂದ ರಕ್ಷಿಸುತ್ತದೆ. ಮಕ್ಕಳನ್ನು ಗೋಡೆಯ ಬಳಿ ಮಲಗಿಸಬೇಡಿ. ಅವರ ಕೈ ಹಾಗೂ ಕಾಲುಗಳಿಗೆ ಸೊಳ್ಳೆ ಕಚ್ಚುತ್ತದೆ.

ನಿಮ್ಮ ಮನೆಯ ಒಳಗೆ ಹಾಗೂ ಹೊರಗೆ ಎಲ್ಲೂ ನೀರು ಇಲ್ಲದಂತೆ ನೋಡಿಕೊಳ್ಳಿ, ಸೊಳ್ಳೆಗಳ ಹುಟ್ಟು ಆರಂಭವಾಗೋದೇ ನಿಂತ ನೀರಿನಿಂದ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!