ಹತ್ರಾಸ್ ಕಾಲ್ತುಳಿತ: ಭೋಲೆ ಬಾಬಾ ಗ್ವಾಲಿಯರ್ ಆಶ್ರಮಕ್ಕೆ ಸೀಲ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಹತ್ರಾಸ್ ಕಾಲ್ತುಳಿತ ಘಟನೆಯ ನಂತರ ಭೋಲೆ ಬಾಬಾ ಗ್ವಾಲಿಯರ್ ಆಶ್ರಮವನ್ನು ಮಧ್ಯಪ್ರದೇಶ ಸರಕಾರದಿಂದ ಸೀಲ್ ಮಾಡಲಾಗಿದೆ.

ಉತ್ತರ ಪ್ರದೇಶದ ಹತ್ರಾಸ್​ನಲ್ಲಿ ಸತ್ಸಂಗ ಕಾರ್ಯಕ್ರಮದಲ್ಲಿ ಕಾಲ್ತುಳಿತ ಉಂಟಾಗಿ 121 ಜೀವಗಳು ಬಲಿಯಾದವು. ಈ ಸಂಬಂಧ ಉತ್ತರ ಪ್ರದೇಶ ಸರ್ಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದೆ. ಇದರ ಬೆನ್ನಲ್ಲೇ ನೆರೆಯ ರಾಜ್ಯಗಳಲ್ಲಿನ ಸರ್ಕಾರಗಳು ಬಾಬಾ ಆಶ್ರಮಗಳತ್ತ ಗಮನ ಹರಿಸಲು ಪ್ರಾರಂಭಿಸಿವೆ. ಇದರ ಭಾಗವಾಗಿ ಮಧ್ಯಪ್ರದೇಶದಲ್ಲಿ ಅಧಿಕಾರಿಗಳು ಗ್ವಾಲಿಯರ್‌ನ ತಿಗ್ರಾ ರಸ್ತೆಯ ಹರಿ ವಿಹಾರ್ ಗ್ರಾಮದಲ್ಲಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ವಿಶಾಲವಾದ ಜಾಗದಲ್ಲಿ ಇರುವ ಆಶ್ರಮಕ್ಕೆ ಸೀಲ್ ಹಾಕಿದ್ದಾರೆ.

ನ್ಯಾಯಾಲಯದ ಅನುಮತಿಯೊಂದಿಗೆ ಶೀಘ್ರದಲ್ಲೇ ಬಾಬಾನ ಗ್ವಾಲಿಯರ್ ಆಶ್ರಮದ ಮೇಲೆ ದಾಳಿ ನಡೆಸಲು ಮಾಬಿ ಪೊಲೀಸರು ಯೋಜಿಸಿದ್ದಾರೆ. ಗ್ವಾಲಿಯರ್‌ನಲ್ಲೂ ಇದಕ್ಕಾಗಿ ಕ್ರಮಗಳನ್ನು ಆರಂಭಿಸಲಾಗಿದೆ. ಇದೇ ರೀತಿಯ ಆಶ್ರಮಗಳು ರಾಜಸ್ಥಾನ, ಹರಿಯಾಣ ಮತ್ತು ಪಂಜಾಬ್‌ನಲ್ಲಿಯೂ ಇವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!