ಮೇಷ
ಸಂತೋಷದ ಮನಸ್ಥಿತಿ. ಬಂಧುಗಳ ಜತೆ ಕಾಲಕ್ಷೇಪ. ಅನಿರೀಕ್ಷಿತ ಖರ್ಚು ಬರಬಹುದು. ಶೇರು ಮಾರುಕಟ್ಟೆಯಲ್ಲಿ ಹಣ ಹೂಡಲು ಸಕಾಲ. ಆರೋಗ್ಯ ಸುಧಾರಣೆ.
ವೃಷಭ
ವೃತ್ತಿಗೆ ಸಂಬಂಧಿಸಿ ನಿಮಗೆ ಅನುಕೂಲ ಬೆಳವಣಿಗೆ. ಕಾರ್ಯ ಸಿದ್ಧಿ. ಸಂಗಾತಿ ಜತೆಗೆ ಭಿನ್ನಾಭಿಪ್ರಾಯ ಉಂಟಾಗದಂತೆ ಎಚ್ಚರ ವಹಿಸಿರಿ.
ಮಿಥುನ
ನಿಮ್ಮ ಸುತ್ತಮುತ್ತ ಶಾಂತಿ ನೆಲೆಸಿದ್ದರೆ ಅದನ್ನು ಕೆಡಿಸುವ ಪ್ರಯತ್ನ ಮಾಡಬೇಡಿ. ಯಥಾಸ್ಥಿತಿ ಇರಲು ಬಿಡಿ. ನಿಮ್ಮ ಸಮಸ್ಯೆಗೆ ಇತರರ ಮನ ನೋಯಿಸದಿರಿ.
ಕಟಕ
ಹಣಕಾಸು ಸ್ಥಿತಿಯ ಕುರಿತು ಎಚ್ಚರ ವಹಿಸಿರಿ. ಈಗ ಎಲ್ಲವೂ ಸರಿಯಾಗಿದೆ ಎಂಬಂತೆ ಕಂಡರೂ ಅನಿರೀಕ್ಷಿತ ಸಮಸ್ಯೆ ಹುಟ್ಟಿಕೊಳ್ಳಬಹುದು.
ಸಿಂಹ
ವೃತ್ತಿ ಮತ್ತು ಖಾಸಗಿ ಬದುಕಿನ ಮಧ್ಯೆ ಸಮತೋಲನ ಸಾಧಿಸಿ. ಒಂದರ ಒತ್ತಡ ಮತ್ತೊಂದರ ಮೇಲೆ ಬೀಳದಂತೆ ನೋಡಿ. ಖರ್ಚು ಅಧಿಕ.
ಕನ್ಯಾ
ಕೆಲಸ ಸುಸೂತ್ರವಾಗಲು, ಆರೋಗ್ಯ ಸುಧಾರಿಸಲು ನಿಮ್ಮ ಜೀವನ ಶೈಲಿಯಲ್ಲಿ ಕೆಲವು ಬದಲಾವಣೆ ಅವಶ್ಯ. ಈ ನಿಟ್ಟಿನಲ್ಲಿ ಗಮನ ಕೊಡಿ. ಸೂಕ್ತ ಸಲಹೆ ಸ್ವೀಕರಿಸಿ.
ತುಲಾ
ಈ ದಿನ ಉದಾಸೀನತೆ ಹೆಚ್ಚು. ಹಣದ ವ್ಯವಹಾರ ನಡೆಸುವಾಗ ಅದರ ಸಾಧಕ ಬಾಧಕ ಪರಾಮರ್ಷಿಸಿ. ಶೈತ್ಯ ಆಹಾರ ಸೇವಿಸಬೇಡಿ, ಆರೋಗ್ಯ ಕೆಟ್ಟೀತು.
ವೃಶ್ಚಿಕ
ವೃತ್ತಿಗೆ ಸಂಬಂಧಿಸಿ ಅಸ್ಥಿರತೆ ಉಂಟಾಗದು. ವದಂತಿಗಳಿಗೆ ಕಿವಿಗೊಡಬೇಡಿ. ಕೌಟುಂಬಿಕ ಬೇಡಿಕೆಗಳನ್ನು ಈಡೇರಿಸಲು ಪ್ರಯಾಸ ಪಡುವಿರಿ.
ಧನು
ಕೋಪದ ಕೈಗೆ ಬುದ್ಧಿ ಕೊಡಬೇಡಿ. ಅದರಿಂದ ಅನಾಹುತ ಆದೀತು. ಸಾಧ್ಯವಾದಷ್ಟು ಶಾಂತ ಮನಸ್ಸಿನಿಂದ ಯೋಚಿಸಿ ಕಾರ್ಯಾಚರಿಸಿ. ಸೂಕ್ತ ನೆರವು ಲಭ್ಯ.
ಮಕರ
ಸಹೋದ್ಯೋಗಿಗಳು ನಿಮ್ಮ ಪತನಕ್ಕೆ ಯತ್ನಿಸಿಯಾರು. ನಿಮ್ಮ ಮನಸ್ಥಿತಿ ನಿಯಂತ್ರಿಸಿ. ಕೋಪತಾಪಕ್ಕೆ ಕಡಿವಾಣ ಹಾಕಿ. ಖರ್ಚು ಇಂದು ಮಿತಿಮೀರಲಿದೆ.
ಕುಂಭ
ಕೆಲವರು ನಿಮ್ಮಿಂದ ಬಹಳಷ್ಟನ್ನು ಅಪೇಕ್ಷಿಸುತ್ತಾರೆ. ಅವರ ನಿರೀಕ್ಷೆಗೆ ನಿರಾಶೆ ಮಾಡಬೇಡಿ. ನಿಮ್ಮಿಂದಾಗುವ ನೆರವು ನೀಡಿರಿ.
ಮೀನ
ಅತಿ ವ್ಯಾಯಾಮದಿಂದ ದೇಹದ ಮೇಲೆ ದುಷ್ಪರಿಣಾಮ ಉಂಟಾದೀತು. ಆರ್ಥಿಕ ಪರಿಸ್ಥಿತಿ ಸದೃಢ. ಆರೋಗ್ಯ ಸಂಬಂಧಿ ಸಮಸ್ಯೆ ಸಂಭವ.