ಡೆಂಗ್ಯೂ ಲಾಸ್ಟ್‌ ಸ್ಟೇಜ್‌ಗೆ ಬಂದ್ರೆ ಯಾವ ಚಿಕಿತ್ಸೆಯೂ ಇಲ್ಲ: ಡಾ. ಮಂಜುನಾಥ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಡೆಂಗ್ಯೂ ಗಂಭೀರ ಹಂತಕ್ಕೆ ತಲುಪಿದಾಗ ಅದಕ್ಕೆ ಚಿಕಿತ್ಸೆಇಲ್ಲ. ಹೀಗಾಗಿ ಏನೇನೋ ಫ್ರೀ ಕೊಡುವ ಬದಲು ಸ್ಲಂ, ವಠಾರಗಳಲ್ಲಿ ವಾಸ ಮಾಡುವವರಿಗೆ ಸೊಳ್ಳೆ ಪರದೆಗಳನ್ನು ಉಚಿತವಾಗಿ ಕೊಡಬೇಕು ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಾ. ಮಂಜುನಾಥ್ ಹೇಳಿದ್ದಾರೆ.

ಡೆಂಗ್ಯೂಗೆ ನಿಖರವಾದ ಚಿಕಿತ್ಸೆ ಇಲ್ಲ. ಇದರ ಜೊತೆಗೆ ಇತರ ಕಾಯಿಲೆಗಳು ಬರುತ್ತವೆ. ಕೋವಿಡ್ ಅನ್ನು ಪ್ಯಾಂಡಮಿಕ್ ಕಾಯಿಲೆ ಎಂದೆವು. ಇದು ಎಂಡಮೆಕ್ ಕಾಯಿಲೆ. ಕೋವಿಡ್ ಮಾದರಿಯಲ್ಲಿ ಇದಕ್ಕೆ ಚಿಕಿತ್ಸೆ ನೀಡಬೇಕು. ಮೆಡಿಕಲ್ ಎಮರ್ಜೆನ್ಸಿ ಅಂತಾ ಘೋಷಣೆ ಮಾಡಬೇಕು ಎಂದು ಹೇಳಿದರು. ಡೆಂಗ್ಯೂ ಬರುವವರೆಗೂ ಕಾಯಬೇಡಿ, ಮನೆಯ ಸುತ್ತಮುತ್ತ ನೀರಿಲ್ಲದಂತೆ ನೋಡಿಕೊಳ್ಳಿ, ಸೊಳ್ಳೆಗಳಿಂದ ನಿಮ್ಮನ್ನು ನೀವೇ ರಕ್ಷಣೆ ಮಾಡಿಕೊಳ್ಳಿ ಎಂದಿದ್ದಾರೆ.

ರೋಗ ಪತ್ತೆಗೆ ಹೆಚ್ಚು ದರ ತೆಗೆದುಕೊಳ್ಳುವ ಲ್ಯಾಬ್ ಗಳ ಬಾಗಿಲು ಮುಚ್ಚಿಸಬೇಕು. ಸೊಳ್ಳೆ ನಿಯಂತ್ರಣ ಮಾಡಬೇಕು. ಆರೋಗ್ಯ ಇಲಾಖೆ, ನಗರಾಭಿವೃದ್ಧಿ ಇಲಾಖೆ ಕೆಲಸ ಮಾಡಬೇಕು. ಇದನ್ನು ನಿಯಂತ್ರಣ ಮಾಡಲು ಟಾಸ್ಕ್ ಫೋರ್ಸ್ ಮಾಡಬೇಕು. ಬೇಸಿಗೆ ಕಾಲದಲ್ಲೇ ನಾವು ಮಳೆಗಾಲದ ಸಮಸ್ಯೆಗಳಿಗೆ ಪರಿಹಾರ ಮಾಡಬೇಕು. ಸಮರೋಪಾದಿಯಲ್ಲಿ ಕೆಲಸ ಮಾಡಬೇಕು ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!