ಮೇಷ
ಮನೆಯಲ್ಲಿ ಇಂದು ಹೆಚ್ಚುವರಿ ಕೆಲಸ. ಇಷ್ಟವಿಲ್ಲದಿದ್ದರೂ ಮಾಡಲೇಬೇಕು. ಉತ್ತಮ ದೇಹಸ್ಥಿತಿ ಕಾಪಾಡಲು ವ್ಯಾಯಾಮ ಮಾಡುವುದೊಳಿತು.
ವೃಷಭ
ದೀರ್ಘ ಕಾಲದಿಂದ ಕಾಡುತ್ತಿದ್ದ ಸಮಸ್ಯೆ ಪರಿಹಾರಕ್ಕೆ ಇಂದಾದರೂ ಮನಸ್ಸು ಮಾಡಿ. ಸಂಗಾತಿ ಜತೆಗಿನ ಬಿಕ್ಕಟ್ಟು ಬಗೆಹರಿಸಿ. ಮುಕ್ತ ಮನಸ್ಸು ಬೇಕು ಅಷ್ಟೆ.
ಮಿಥುನ
ದೇಹಾರೋಗ್ಯ ಕಾಪಾಡಲು ಆದ್ಯತೆ ಕೊಡಿ. ನಿರ್ಲಕ್ಷ್ಯವು ಅಸೌಖ್ಯಕ್ಕೆ ಕಾರಣ ಆಗಬಹುದು. ಖರ್ಚು ಹೆಚ್ಚಳ. ಅದಕ್ಕೆ ವಸ್ತು ಖರೀದಿ ಕಾರಣ.
ಕಟಕ
ಇತರರ ಜತೆ ಹೆಚ್ಚು ಹೊಂದಾಣಿಕೆ ಸಾಧಿಸಿ. ಇದು ನಿಮ್ಮ ವ್ಯಕ್ತಿತ್ವ ವಿಕಸನಕ್ಕೂ ಕಾರಣವಾಗುವುದು. ಆಪ್ತರ ಜತೆ ಮೋಜು ಮಾಡುವ ಅವಕಾಶ.
ಸಿಂಹ
ಆತ್ಮೀಯ ಸಂಬಂಧ ಲಘುವಾಗಿ ಪರಿಗಣಿಸದಿರಿ. ಅವರ ಭಾವನೆಗೆ ಬೆಲೆ ಕೊಡಿ. ಕೆಲ ವಿಷಯಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು.
ಕನ್ಯಾ
ಬಿಡುವಿಲ್ಲದ ದಿನ. ಅತಿಥಿಗಳ ಭೇಟಿ. ಮನೆಯ ನವೀಕರಣಕ್ಕೆ ಮನಸ್ಸು ಮಾಡುವಿರಿ. ಬಸುರಿಯರು ಆರೋಗ್ಯದ ಬಗ್ಗೆ ಎಚ್ಚರ ವಹಿಸಿರಿ.
ತುಲಾ
ಏಕತಾನತೆ ನಿಮಗಿಷ್ಟವಿಲ್ಲ ಹೊಸತನಕ್ಕೆ ತುಡಿಯುವಿರಿ. ಕೆಲವರಿಗೆ ತಲೆನೋವು, ರಕ್ತದೊತ್ತಡ ಕಾಡಬಹುದು. ಕೌಟುಂಬಿಕ ಸಮಾಧಾನ.
ವೃಶ್ಚಿಕ
ನಿಮ್ಮ ಸೂಕ್ಷ್ಮ ನೋಟ ಇತರರ ತಪ್ಪು ಗುರುತಿಸಬಲ್ಲುದು. ಅದುವೇ ಸಂಘರ್ಷ ಸೃಷ್ಟಿಸದಂತೆ ನೋಡಿಕೊಳ್ಳಿ. ಖರೀದಿ ವ್ಯಾಪಾರ ಜೋರು.
ಧನು
ನಿಮ್ಮ ಮನಸ್ಸು ಪದೇಪದೇ ಏರುಪೇರು ಅನುಭವಿಸಬಹುದು. ಆತ್ಮೀಯರ ಕಡೆಗಣನೆ. ಮನಸ್ಸಿಗೆ ನೋವು. ಹಣದ ಚಿಂತೆ ಕಾಡಬಹುದು.
ಮಕರ
ಕೌಟುಂಬಕ ಕೆಲಸದಲ್ಲಿ ಇಂದು ಮಗ್ನರಾಗುವಿರಿ. ಮನಶ್ಯಾಂತಿ ಕೆಡಿಸಿದ್ದ ವಿಷಯ ಇತ್ಯರ್ಥ ಕಾಣುವುದು. ವೈದ್ಯರ ಸಮಾಲೋಚನೆ ಇಲ್ಲದೆ ಔಷಧ ತೆಗೆದುಕೊಳ್ಳದಿರಿ.
ಕುಂಭ
ಅನ್ಯರಿಗೆ ಹಣ ಸಹಾಯ ಮಾಡುವ ಮುನ್ನ ಸರಿಯಾಗಿ ಯೋಚಿಸಿ. ಇಂದು ಹೊರಹೋಗುವ ಹಣ ನಾಳೆ ಮತ್ತೆ ಕೈಗೆ ಸಿಗಲಾರದು. ಕೌಟುಂಬಿಕ ನೆಮ್ಮದಿ.
ಮೀನ
ಸಮಸ್ಯೆಯಿಂದ ಪಾರಾಗಬೇಕಾದರೆ ಸಂಗಾತಿ ಜತೆಗಿನ ವಿವಾದ ಪರಿಹಾರ ಮಾಡಿಕೊಳ್ಳಿ. ಅದನ್ನು ಬೆಳೆಯಗೊಟ್ಟಷ್ಟೂ ಹಾನಿ ಹೆಚ್ಚು.