ಕಲಬುರಗಿಯ ಚಿಂಚೋಳಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಘಟಕ ಸ್ಫೋಟ

ಹೊಸದಿಗಂತ ಕಲಬುರಗಿ:

ಜಿಲ್ಲೆಯ ಚಿಂಚೋಳಿ ತಾಲೂಕಿನ ತಾಲೂಕು ಆಸ್ಪತ್ರೆಯಲ್ಲಿ ಆಕ್ಸಿಜನ್ ಘಟಕ ಸ್ಫೋಟಗೊಂಡಿದ್ದು, ಆಕ್ಸಿಜನ್ ಲಿಕ್ ಆಗಿರುವ ಘಟನೆ ನಡೆದಿದೆ.

ಚಿಂಚೋಳಿ ತಾಲೂಕಿನ ಚಂದಾಪುರ ಪಟ್ಟಣದಲ್ಲಿರುವ ತಾಲೂಕಿನ ಆಸ್ಪತ್ರೆಯಲ್ಲಿ ಭಾನುವಾರ ಬೆಳಗ್ಗೆ 10 ಗಂಟೆಗೆ 5 ಸಾವಿರ ಲೀಟರ್ ಸಾಮಥ್ರ್ಯ ಹೊಂದಿರುವ ಆಕ್ಸಿಜನ್ ಘಟಕದಲ್ಲಿ ಸ್ಪೋಟವಾಗಿದೆ.

ಆಕ್ಸಿಜನ್ ಘಟಕದಲ್ಲಿ ಸ್ಪೋಟಗೊಂಡ ಹಿನ್ನೆಲೆಯಲ್ಲಿ ಒಂದು ಗಂಟೆಯಿಂದ ಆಕ್ಸಿಜನ್ ಲಿಕ್ ಆಗುತ್ತಿದ್ದು, ಆಕ್ಸಿಜನ್ ಲಿಕ್ ಆಗುತ್ತಿರುವುದರಿಂದ ಆಸ್ಪತ್ರೆಯಲ್ಲಿನ ಒಳ-ಹೊರ ರೋಗಿಗಳನ್ನು ಆಸ್ಪತ್ರೆಯಿಂದ ಹೊರಗಡೆ ವೇಟಿಂಗ್ ಮಾಡಿಸಲಾಗುತ್ತಿದೆ.

ಇನ್ನೂ ಆಕ್ಸಿಜನ್ ಘಟಕ ಸ್ಪೋಟಗೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿನ ಸಿಬ್ಬಂದಿಗಳು ಮತ್ತು ರೋಗಿಗಳು ಆತಂಕಕ್ಕೆ ಒಳಗಾಗಿದ್ದು, ಸ್ಥಳಕ್ಕ ಜಿಲ್ಲಾ ಆರೋಗ್ಯ ಅಧಿಕಾರಿ ರತಿಕಾಂತ ಸ್ವಾಮಿ ಭೇಟಿ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!