ಹೊಸದಿಗಂತ ವರದಿ, ಗದಗ :
ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿದ್ದು ತಾಲೂಕಿನ ಶಿರುಂಜ ಗ್ರಾಮದ ಐದು ವರ್ಷದ ಮಗುವೊಂದು ಡೆಂಗ್ಯೂ ಜ್ವರಕ್ಕೆ ಸಾವುನ್ನಪ್ಪಿದೆ.
ಶಿರುಂಜ ಗ್ರಾಮದ ಚಿರಾಯಿ ಮಂಜುನಾಥ ಹೊಸಮನಿ (5) ಎಂಬ ಮಗು ತೀವ್ರವಾದ ಜ್ವರದಿಂದ ಬಳಲುತ್ತಿದ್ದರಿಂದ ಆ ಮಗುವನ್ನು ಗದುಗಿನ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು ಹೆಚ್ಚಿನ ಚಿಕಿತ್ಸೆಗಾಗಿ ಅಲ್ಲಿಂದ ಧಾರವಾಡದ ಎಸ್‌ಡಿ ಎಂ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು ಆದರೆ, ಎಸ್‌ಡಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ.
ಡೆಂಗ್ಯೂ ಜ್ವರಕ್ಕೆ ಬಲಿಯಾದ ಚಿರಾಯಿ ಮನೆಯಲ್ಲಿ ಕುಟುಂಬಸ್ತರ ಆಕ್ರಂದನ ಮುಗಿಲು ಮುಟ್ಟಿದೆ. ಮತ್ತು ವೈದ್ಯರ ನಿರ್ಲಕ್ಷ್ಯದಿಂದ ಮಗು ಬಲಿಯಾದ ಬಗ್ಗೆ ಕುಟುಂಬದ ಆರೋಪ ಮಾಡುತ್ತಿದ್ದಾರೆ. ವೈದ್ಯರುಗಳು ಐಸಿಯು ವ್ಯವಸ್ಥೆ ಮಾಡದಿರುವದು ಮಗುವಿನ ಸಾವಿಗೆ ಕಾರಣ ಎಂದು ಚಿರಾಯಿ ತಂದೆ ಮಂಜುನಾಥ್, ತಾಯಿ ಸುಜಾತಾ ಆರೋಪ ಮಾಡುತ್ತಿದ್ದಾರೆ. ಜುಲೈ 1 ರಂದು ಮಗುವಿಗೆ ಜ್ವರ ಕಾಣಿಸಿಕೊಂಡಿದ್ದರಿಂದ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು, ಜ್ವರ ಬಂದು ಒಂದು ವಾರದಲ್ಲಿ ಮಗು ಮೃತಪಟ್ಟಿದೆ.