ದೇಶಕ್ಕಾಗಿ ಮಡಿಯುವ ಅಗತ್ಯವಿಲ್ಲ, ದೇಶಕ್ಕಾಗಿ ಜೀವಿಸಿ: ಅಮಿತ್ ಶಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶಕ್ಕಾಗಿ ಮಡಿಯುವ ಅಗತ್ಯವಿಲ್ಲ. ದೇಶಕ್ಕಾಗಿ ಜೀವಿಸಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಕರೆ ನೀಡಿದ್ದಾರೆ.

ಗುಜರಾತ್ ಅಭಿವೃದ್ಧಿಗೆ ಕಡ್ವ ಪಾಟಿದಾರ್ ಸಮುದಾಯದ ಕೊಡುಗೆಯನ್ನು ಶ್ಲಾಘಿಸುವ ಸಂದರ್ಭ ಅಮಿತ್ ಶಾ ,’ನೀವು ಒಳ್ಳೆಯ ಐಎಎಸ್, ಐಪಿಎಸ್, ಸಿಎ, ವೈದ್ಯ, ಒಳ್ಳೆಯ ನಾಗರಿಕರಾಗಿರಬಹುದು. ಆದರೆ, ನೀವು ದೇಶಕ್ಕಾಗಿ ಕೆಲಸ ಮಾಡಬೇಕಿದೆ’ಎಂದಿದ್ದಾರೆ.

ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರ ಸಮ್ಮುಖದಲ್ಲಿ ಪಾಟಿದಾರ್ ಸಮುದಾಯಕ್ಕೆ ನಿರ್ಮಾಣ ಮಾಡಲಾಗಿರುವ ಹಾಸ್ಟೆಲ್‌ವೊಂದನ್ನು ಉದ್ಘಾಟಿಸಿದರು.

ಗುಜರಾತ್ ಅಭಿವೃದ್ಧಿ ಮತ್ತು ಪಾಟಿದಾರ್ ಸಮುದಾಯದ ಅಭಿವೃದ್ಧಿ ಎರಡೂ ಒಂದೇ. ತಮ್ಮ ಪರಿಶ್ರಮದ ಮೂಲಕ ಪಾಟಿದಾರ್ ಸಮುದಾಯ ತಮ್ಮ ಅಭಿವೃದ್ಧಿ ಜೊತೆಗೆ ರಾಜ್ಯ ಮತ್ತು ದೇಶದ ಬೆಳವಣಿಗೆಗೆ ಕೊಡುಗೆ ನೀಡಿದೆ ಎಂದಿದ್ದಾರೆ.

ಉತ್ತರ ಗುಜರಾತ್‌ನಲ್ಲಿ ಓದಿದ ಪಾಟಿದಾರ್ ಸಮುದಾಯದ ಹಲವರು ದೇಶಕ್ಕಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಕ್ಕಳಿಗೆ ಒಳ್ಳೆಯ ಗುಣಮಟ್ಟದ ಶಿಕ್ಷಣ ನೀಡುವುದು ಮುಖ್ಯ. ಶಿಕ್ಷಣವು ಅಭಿವೃದ್ಧಿಯ ಅಡಿಪಾಯ. ಶಿಕ್ಷಣ ಕ್ಷೇತ್ರವನ್ನು ಬಲಿಷ್ಠಗೊಳಿಸುವ ಮೂಲಕ ದೇಶದ ಭವಿಷ್ಯವನ್ನು ಉಜ್ವಲಗೊಳಿಸಲು ಸರ್ಕಾರ ಶ್ರಮಿಸುತ್ತಿದೆ ಎಂದಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!