ಮೇಷ
ನೀವು ಎಸಗಿದ ಹಳೆಯ ಕಾರ್ಯವೊಂದು ಈಗ ಪರಿಣಾಮ ಬೀರಬಹುದು. ತಪ್ಪೆಸಗಿದ್ದರೆ ಸರಿಪಡಿಸಲು ಯತ್ನಿಸಿ. ಆಪ್ತರ ಸಹಕಾರ ಲಭ್ಯ.
ವೃಷಭ
ದಿನವನ್ನು ಆರಾಮವಾಗಿ ಕಳೆಯಬೇಕೆಂಬ ನಿಮ್ಮ ಯೋಜನೆ ಫಲಿಸದು. ಅನಿರೀಕ್ಷಿತ ಬೆಳವಣಿಗೆ ಸಂಭವಿಸುವುದು. ದಿನವಿಡೀ ಕಾರ್ಯದಲ್ಲಿ ಮಗ್ನರಾಗುವಿರಿ.
ಮಿಥುನ
ಅತಿಯಾದ ಕೆಲಸದ ಒತ್ತಡ ಕಾಡುವುದು. ಸುಲಭ ಕಾರ್ಯವೂ ಕಷ್ಟಕರವಾಗಿ ಪರಿಣಮಿಸುವುದು. ಅದಕ್ಕೆ ನಿಮ್ಮ ಉದ್ವಿಗ್ನ ಮನಸ್ಥಿತಿಯೂ ಕಾರಣ.
ಕಟಕ
ನಿಮ್ಮ ಕುಟುಂಬದ ನೆಮ್ಮದಿ ಹಾಳು ಮಾಡುವ ಆಲೋಚನೆ ಯಿಂದ ದೂರವಿರಿ. ಕೆಲವರ ಚಾಡಿಮಾತನ್ನು ನಂಬಬೇಡಿ. ಅವರನ್ನು ದೂರವಿಡಿ.
ಸಿಂಹ
ಜನರ ನಡುವೆ ಬೆರೆತು ಬಾಳಲು ಕಲಿಯಿರಿ. ಎಲ್ಲರಿಂದ ದೂರವಾಗಿ ನಿಲ್ಲಬೇಡಿ. ಕೌಟುಂಬಿಕ ಸಮಸ್ಯೆ ಶಾಂತಿಯಿಂದ ಬಗೆಹರಿಸಿ. ಸಂಘರ್ಷಕ್ಕೆ ಹೋಗದಿರಿ.
ಕನ್ಯಾ
ಆಪ್ತರ ಕುರಿತಾದ ಚಿಂತೆಯು ಮನಸ್ಸನ್ನು ಕಾಡುವುದು. ಎಲ್ಲವೂ ಇದ್ದೂ ನೆಮ್ಮದಿ ಇಲ್ಲದಾಗುವ ಸ್ಥಿತಿಯನ್ನು ನೀವಿಂದು ಅನುಭವಿಸುವಿರಿ.
ತುಲಾ
ಖಾಸಗಿ ಹಿತಾಸಕ್ತಿಗೆ ಗಮನ ಹರಿಸಲು ಸಾಧ್ಯವಾಗದ ಸ್ಥಿತಿ. ಇತರರ ಕಾರ್ಯ ಮಾಡುವುದರಲ್ಲೆ ನಿಮ್ಮ ಸಮಯ ವಿನಿಯೋಗ. ಸಹನೆ ಕಳಕೊಳ್ಳದಿರಿ.
ವೃಶ್ಚಿಕ
ಕೆಲವರ ವರ್ತನೆ ನಿಮ್ಮ ಮನಶ್ಯಾಂತಿ ಕಲಕಬಹುದು. ನಿಮ್ಮ ವ್ಯವಹಾರದಲ್ಲಿ ಅವರು ಮೂಗು ತೂರಿಸುತ್ತಾರೆ. ಆಪ್ತರಿಂದ ನಿಮಗೆ ಸಾಂತ್ವನ ದೊರಕೀತು.
ಧನು
ಈ ದಿನವು ನಿಮಗೆ ಪೂರಕವಾಗಿ ಆರಂಭ ವಾಗದಿದ್ದರೂ ಬಳಿಕ ಎಲ್ಲವೂ ಸುಸೂತ್ರವಾಗಲಿದೆ. ನೀವು ಬಯಸಿದ ಕಾರ್ಯ ನೆರವೇರಲಿದೆ.
ಮಕರ
ಅಪನಿಂದೆ ಕೇಳುವಿರಿ. ನಿಮ್ಮ ವರ್ತನೆಯು ಅದಕ್ಕೆ ಆಸ್ಪದ ನೀಡಿದೆಯೆ ಎಂದು ಪರಿಶೀಲಿಸಿಕೊಳ್ಳಿ. ಸಂಘರ್ಷದ ಬದಲು ಸಂಧಾನ ಒಳಿತು.
ಕುಂಭ
ಅತಿಯಾದ ಭಾವುಕ ವರ್ತನೆ ಸಂಬಂಧದ ಮೇಲೆ ಪರಿಣಾಮ ಬೀರಬಹುದು. ಅನ್ಯರ ವರ್ತನೆಯೆಲ್ಲವನ್ನೂ ಭಾವನಾತ್ಮಕತೆಯಿಂದ ಅಳೆಯಬೇಡಿ.
ಮೀನ
ಕೆಲವರ ನಡೆನುಡಿ ನಿಮ್ಮ ಮನಸ್ಸಿಗೆ ಒಪ್ಪಿಗೆ ಆಗದಿರಬಹುದು. ದರೂ ಅವರೊಂದಿಗೆ ಹೊಂದಾಣಿಕೆ ಸಾಧಿಸಿ. ಸಂಘರ್ಷದಿಂದ ಕೆಲಸ ಆಗಲಾರದು.