ಹೊಸದಿಗಂತ ಡಿಜಿಟಲ್ ಡೆಸ್ಕ್:
ಮನೆಯಲ್ಲೇ ಕೂತು ಟಿಕೆಟ್ ಬುಕ್ ಮಾಡೋದು, ಥಿಯೇಟರ್‌ಗೆ ಹೋಗಿ ಟಿಕೆಟ್ ಬುಕ್ ಮಾಡೋದು ಕಾಮನ್. ಆದರೆ ಟಿಕೆಟ್ ಇಲ್ಲದೆ ಅರ್ಧ ಸಿನಿಮಾ ನೋಡೋದು?
ಹೌದು, ಇಂಟರ್‌ವಲ್ ವರೆಗೂ ಸಿನಿಮಾ ವೀಕ್ಷಿಸಿ, ಫಿಲಂ ಇಷ್ಟ ಆದ್ರೆ ಮಾತ್ರ ಟಿಕೆಟ್ ತೆಗೆದುಕೊಳ್ಳಿ ಅನ್ನೋ ಪ್ಲಾನ್‌ನ್ನು ಈ ಸಿನಿಮಾ ಮಾಡಿದೆ. ಇದು ನಮ್ಮ ಕನ್ನಡದ ನಾಕ್‌ಔಟ್ ಸಿನಿಮಾ.
ಜುಲೈ 19ರಂದು ನಾಕ್‌ಔಟ್ ಸಿನಿಮಾ ರಿಲೀಸ್ ಆಗುತ್ತಿದೆ. ಈ ಸಿನಿಮಾ ತಂಡ ಹೊಸ ಪ್ಲ್ಯಾನ್ ಮಾಡಿದೆ. ಅದುವೇ ಅರ್ಥ ಸಿನಿಮಾ ಉಚಿತವಾಗಿ ನೋಡಿ, ಇನ್ನರ್ಧ ಬೇಕಿದ್ರೆ ಟಿಕೆಟ್ ಖರೀದಿಸಿ ಎಂದು. ಇದರ ಅರ್ಥ ಏನೆಂದರೆ ಟಿಕೆಟ್ ಖರೀದಿಸಿ ಸಿನಿಮಾ ಚೆನ್ನಾಗಿಲ್ಲ ಅಂತ ಹೊರ ಬಂದು ಬೇಸರ ಮಾಡಿಕೊಳ್ಳುವ ಬದಲು…ಫಸ್ಟ್ ಹಾಫ್ ಸಿನಿಮಾ ನೋಡಿದ ಮೇಲೆ ಏನೋ ಇಂಟ್ರೆಸ್ಟಿಂಗ್ ಆಗಿದೆ ಅಂತ ಎರಡನೇ ಭಾಗ ನೋಡಲು ಮುಂದಾಗುವವರು ಟಿಕೆಟ್ ಖರೀದಿಸಬೇಕಾಗುತ್ತದೆ.
ಚಿತ್ರ ಗುಣಮಟ್ಟವನ್ನು ಮೊದಲರ್ಧ ಸಿನಿಮಾದಲ್ಲಿ ನಿರ್ಧರಿಸುವ ಪ್ರೇಕ್ಷಕರು ಉಚಿತವಾಗಿ ಸಿನಿಮಾ ನೋಡಬಹುದು. ನಂತರ ಸೆಕೆಂಡ್ ಹಾಫ್ ಸಿನಿಮಾ ನೋಡಬೇಕು ಅನಿಸಿದರೆ ಮಾತ್ರ ಟಿಕೆಟ್ ಕೊಂಡು ನೋಡಬಹುದು. ಪ್ರಮುಖ ಚಿತ್ರಮಂದಿರಗಳಲ್ಲಿ ಮಾತ್ರ ಈ ವ್ಯವಸ್ಥೆ ಸೀಮಿತ ಎಂದು ನಿರ್ದೇಶಕ ಅಂಬರೀಶ್ ಹೇಳಿದ್ದಾರೆ.