ಹೊಸದಿಗಂತ ವರದಿ, ಶಿವಮೊಗ್ಗ :
ಹಾವೇರಿಯಲ್ಲಿ ಬಳಿ ನಿಂತಿದ್ದ ಲಾರಿಗೆ ಟೆಂಪೋ ಟ್ರಾವೆಲ್ಲರ್‌ವೊಂದು ಡಿಕ್ಕಿ ಹೊಡೆದು 13 ಜನರು ಮೃತಪಟ್ಟ ಕುಟುಂಬದವರಿಗೆ ನಟ ಶಿವರಾಜ್‌ಕುಮಾರ್ ಮತ್ತು ಗೀತಾ ಶಿವರಾಜ್‌ಕುಮಾರ್ ಸೋಮವಾರ 13 ಲಕ್ಷ ರೂ.ಗಳ ವೈಯುಕ್ತಿಕ ಪರಿಹಾರ ವಿತರಿಸಿದರು.
ನಟ ಶಿವರಾಜ್ ಕುಮಾರ್ ಮತ್ತು ಪತ್ನಿ ಗೀತ ಹೊಳೆಹೊನ್ನೂರು ಸಮೀಪದ ಎಮ್ಮೆಹಟ್ಟಿ ಗ್ರಾಮಕ್ಕೆ ಭೇಟಿ ನೀಡಿ ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿ ಆರ್ಥಿಕ ನೆರವು ನೀಡಿದರು.
ಈ ವೇಳೆ ಗೀತಾ ಶಿವರಾಜ್‌ಕುಮಾರ್ ಮಾತನಾಡಿ, ಈ ಘಟನೆ ನಮಗೆ ಜೀರ್ಣಿಸಲು ಆಗುವುದಿಲ್ಲ. ಭಗವಂತ ಮೃತರ ಕುಟುಂಬಗಳಿಗೆ ದುಃಖ ತಡೆದುಕೊಳ್ಳುವ ಶಕ್ತಿ ನೀಡಲಿ. ಎಮ್ಮೆಹಟ್ಟಿ ಗ್ರಾಮದ ಗ್ರಾಮಸ್ಥರು ಸಾಂತ್ವನ ಹೇಳುವ ಕೆಲಸ ಮಾಡಿದ್ದಾರೆ. ಕುಟುಂಬದ ಉಳಿದ ಸದಸ್ಯರಿಗೆ ಧೈರ್ಯ ತುಂಬಿದ್ದಾರೆ. ನಮ್ಮ ಕೈಲಾದಷ್ಟು ಸಹಾಯ ಮಾಡಿದ್ದೇವೆ. ಮುಂದೆ ಕೂಡ ನೆರವು ನೀಡುತ್ತೇವೆ. ಹೋದ ಜೀವಗಳ ನಷ್ಟ ನಾವು ತುಂಬಿಕೊಡಲು ಆಗುವುದಿಲ್ಲ. ನಮ್ಮ ಕೈಲಾದಷ್ಟು ಸಹಾಯ ಮಾಡಿದ್ದೇವೆ ಎಂದರು.
ನಟ ಶಿವರಾಜ್‌ಕುಮಾರ್ ಮಾತನಾಡಿ, ಇಂತಹ ಸಂದರ್ಭದಲ್ಲಿ ಎಲ್ಲರೂ ಸಹಾಯ ಮಾಡಬಹುದು. ಆದರೆ ಸಮಧಾನ ಮಾಡುವುದು ಕಷ್ಟ. ಈ ದುರ್ಘಟನೆಯ ನೆನಪು ಸದಾ ಕಾಡುತ್ತಿರುತ್ತದೆ. ಅದನ್ನು ಗೆಲ್ಲುವ ಶಕ್ತಿ ದೇವರು ಕೊಡಲಿ. ಘಟನೆ ನೋಡಿ ಬಹಳ ದುಃಖವಾಯಿತು. ಕುಟುಂಬದ ಮಕ್ಕಳಿಗೆ ಮುಂದಿನ ದಿನಗಳಲ್ಲಿ ವಿದ್ಯಾಭ್ಯಾಸಕ್ಕೆ ಕೂಡ ನೆರವು ನೀಡುವ ಭರವಸೆ ನೀಡುತ್ತಿದ್ದೇನೆ ಎಂದರು.
ಮತ್ತೊಂದು ಚುನಾವಣೆಯ ಅಭ್ಯರ್ಥನಕ್ಕೆ ಪೂರ್ವತಯಾರಿ.
ಪಕ್ಷ ಬೇರೆ ಇರಲಿ ಬಹುದು.