ಹೊಸದಿಗಂತ ವರದಿ, ದಾವಣಗೆರೆ:
ನೀರು ಪೂರೈಕೆಗೆ ಒದಗಿಸಿದ್ದ ಸಾಮಾನುಗಳ ಬಿಲ್ ಮೊತ್ತ ಮಂಜೂರು ಮಾಡಲು 2 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ ಹರಿಹರ ನಗರಸಭೆ ಪೌರಾಯುಕ್ತರು ಲಂಚದ ಹಣವನ್ನು ತಮ್ಮ ಕೊಠಡಿಯಲ್ಲಿ ಪಡೆಯುತ್ತಿದ್ದ ವೇಳೆ ಲೋಕಾಯುಕ್ತರ ಬಲೆಗೆ ಸಿಕ್ಕಿ ಬಿದ್ದಿದ್ದಾರೆ.
ಜಿಲ್ಲೆಯ ಹರಿಹರ ನಗರಸಭೆ ಪೌರಾಯುಕ್ತ ಐ.ಬಸವರಾಜ ಲೋಕಾಯುಕ್ತಕ್ಕೆ ಸಿಕ್ಕಿಬಿದ್ದವರು. ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕು ಕುಮಾರಪಟ್ಟಣಂನ ಪ್ರಭು ಟ್ರೇಡರ್ಸ್ ಮಾಲೀಕ, ಮೆಟಿರಿಯಲ್ ಸಪ್ಲೈಯರ್ ಹೆಚ್.ಕರಿಬಸಪ್ಪ ಎಂಬುವರಿಗೆ ಹರಿಹರ ನಗರಸಭೆ ವ್ಯಾಪ್ತಿಯಲ್ಲಿ ಒದಗಿಸಿದ್ದ ನೀರು ಪೂರೈಕೆ ಸಾಮಗ್ರಿಗಳಿಗೆ 25-30 ಲಕ್ಷ ರೂ. ಬಿಲ್ ಮೊತ್ತ ಮಂಜೂರು ಮಾಡಬೇಕಾಗಿತ್ತು. ಇದಕ್ಕಾಗಿ ಹರಿಹರ ನಗರಸಭೆ ಪೌರಾಯುಕ್ತ ಐ.ಬಸವರಾಜ 2 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಹೆಚ್.ಕರಿಬಸಪ್ಪ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ದಾವಣಗೆರೆ ಲೋಕಾಯುಕ್ತ ಪೊಲೀಸರು, ಹರಿಹರದ ಹರಿಹರೇಶ್ವರ ಬಡಾವಣೆಯ ತಮ್ಮ ಕೊಠಡಿಯಲ್ಲಿ 2 ಲಕ್ಷ ರೂ. ಲಂಚದ ಹಣವನ್ನು ಸ್ವೀಕರಿಸುವಾಗ ನಗರಸಭೆಯ ಪೌರಾಯುಕ್ತ ಐ.ಬಸವರಾಜ ಅವರನ್ನು ಬಂಧಿಸಿದ್ದಾರೆ. ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಎಸ್.ಕೌಲಾಪೂರೆ, ಉಪಾಧೀಕ್ಷಕಿ ಕಲಾವತಿ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕರಾದ ಪ್ರಭು ಬ.ಸೂರಿನ, ಸಿ.ಮಧುಸೂದನ್, ಹೆಚ್.ಎಸ್.ರಾಷ್ಟ್ರಪತಿ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಇಂತ ಅಧಿಕಾರಿಗಳನ್ನು dismiss ಮಾಡ್ಬೇಕು ಅವರಿಗೆ ಸರ್ಕಾರ ಎಷ್ಟೇ ಕೊಟ್ಟರು ಸಾಲದು dismiss ಮಾಡಿದರೆ ಮತ್ತೆ ಯಾರು ಈ ರೀತಿ ಮಾಡುವುದಿಲ್ಲ
ಹರಿಹರ ನಗರಸಭೆ ಒಂದು ಭ್ರಷ್ಟಾಚಾರ ಗೂಡಾಗಿದೆ ನಗರಸಭೆಯಲ್ಲಿ ಯಾವುದೇ ಕೆಲಸ ಮಾಡಿಸಲಿಕ್ಕೆ ಹೋದರೆ ಲಂಚ ಲಂಚ ಲಂಚ. ಲಂಚ ಕೊಟ್ಟರೆ ಕೆಲಸ. ಲಂಚ ಕೊಡದಿದ್ದರೆ ಯಾವುದು ಕೆಲಸ ಆಗುವುದಿಲ್ಲ ಕಾನೂನಿನ ಅಡಚಣೆಗಳು ಕಾನೂನಿನ ತೊಂದರೆಗಳನ್ನು ಮುಂದಿಟ್ಟು ಮಾಡಿಕೊಡುವುದಿಲ್ಲ.
Modalu intaha thimingala galannu hididu takshanave seveyinda vaja maduvudu olitu illavadare beledu hemmaravaginiduttare