ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಿ2೦ವಿಶ್ವಕಪ್ ತಂಡದ ಭಾಗವಾಗಿದ್ದ ಸ್ಪಿನ್ನರ್ ಕುಲ್ದೀಪ್ ಯಾದವ್ ಅವರನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅಭಿನಂದಿಸಿದ್ದಾರೆ. ಜತೆಗೆ ಸ್ಮರಣಿಯನ್ನು ನೀಡಿ ಗೌರವಿಸಿದ್ದಾರೆ.
ಕುಲ್ದೀಪ್ ಯಾದವ್ ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಒಟ್ಟು 10 ವಿಕೆಟ್ ಕಿತ್ತು ಮಿಂಚಿದ್ದರು. ಉತ್ತಮ ಎಕಾನಮಿಯಲ್ಲಿ ಬೌಲಿಂಗ್ ನಡೆಸಿ ಗಮನಸೆಳೆದಿದ್ದರು.
ಗೆಲುವಿನ ಬಳಿಕ ಟ್ರೋಫಿ ಎತ್ತಿ ಹಿಡಿಯುವಾಗ ನಾಯಕ ರೋಹಿತ್ ಶರ್ಮ ವಿಶೇಷ ರೀತಿಯಲ್ಲಿ ಹೆಜ್ಜೆ ಹಾಕಿ ಸಂಭ್ರಮಿಸಿದ್ದರು. ಈ ಬಗ್ಗೆ ಪ್ರಧಾನಿ ಮೋದಿ ಪ್ರಶ್ನೆ ಕೇಳಿದಾಗ ಕುಲ್ದೀಪ್ನೀಡಿರುವ ಉತ್ತರ ಕೇಳಿ ಮೋದಿ ಸೇರಿ ಟೀಮ್ ಇಂಡಿಯಾ ಆಟಗರರು ನಗೆಗಡಲಲ್ಲಿ ತೇಲಿದ್ದರು.
ರೋಹಿತ್ ಬಳಿ ಮೋದಿ ಅವರು ಈ ರೀತಿ ಸಂಭ್ರಮಿಸಲು ಚಾಹಲ್ ಸಲಹೆ ನೀಡಿದರೇ? ಎಂದು ಕೇಳಿದರು. ಈ ವೇಳೆ ನಗುಮುಖದಿಂದಲೇ ರೋಹಿತ್, ‘ಹೌದು ಚಾಹಲ್ ಹಾಗೂ ಕುಲದೀಪ್ ಅವರು ಸಲಹೆ ನೀಡಿದ್ದರು’ ಎಂದು ತಿಳಿಸಿದರು. ಈ ವೇಳೆ ಕುಲದೀಪ್ ಅವರಲ್ಲಿ ನಿಮ್ಮ ನಾಯಕನನ್ನು ನೃತ್ಯ ಮಾಡುವಂತೆ ಹೇಳಲು ಹೇಗೆ ಧೈರ್ಯ ಬಂತು ಎಂದು ಪ್ರಧಾನಿ ಕೇಳಿದರು. ಇದಕ್ಕೆ ಉತ್ತರಿಸಿದ ಕುಲ್ದೀಪ್, ನಾನು ಹೇಳಿಕೊಟ್ಟಂತೆ ರೋಹಿತ್ ಅನುಕರಿಸಲಿಲ್ಲ ಎಂದು ಹೇಳಿದರು. ಈ ಮಾತು ಕೇಳಿ ಮೋದಿ ಜೋರಾಗಿ ನಕ್ಕರು.