ಪ್ಯಾರಿಸ್ ಒಲಿಂಪಿಕ್ಸ್: ಸಿಂಧು, ಶರತ್ ಕಮಲ್ ಭಾರತದ ಧ್ವಜಧಾರಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:  

ಜುಲೈ 26ರಿಂದ ಆರಂಭಗೊಳ್ಳಲಿರುವ ಪ್ಯಾರಿಸ್ ಒಲಿಂಪಿಕ್ಸ್ ನ ಉದ್ಘಾಟನಾ ಸಮಾರಂಭದಲ್ಲಿ ಭಾರತದ ಧ್ವಜಧಾರಿಯಾಗಿ ಅವಳಿ ಒಲಿಂಪಿಕ್ಸ್​ ಪದಕ ವಿಜೇತೆಪಿ.ವಿ.ಸಿಂಧು ಮತ್ತು ಹಿರಿಯ ಟೇಬಲ್ ಟೆನಿಸ್ ಆಟಗಾರ ಶರತ್ ಕಮಲ್ ಆಯ್ಕೆಯಾಗಿದ್ದಾರೆ.

ಮಾಜಿ ಒಲಿಂಪಿಕ್​ ಪದಕ ವಿಜೇತ ಶೂಟರ್​ ಗಗನ್​ ನಾರಂಗ್​ ಅವರನ್ನು ತಂಡದ ಷೆಫ್ ಡಿ ಮಿಷನ್ ಆಗಿ ಸೋಮವಾರ ನೇಮಿಸಲಾಗಿದೆ.

ವೈಯಕ್ತಿಕ ಕಾರಣ ನೀಡಿ 2 ತಿಂಗಳ ಹಿಂದೆ ಮೇರಿ ಕೋಮ್ ಅವರು ಷೆಫ್ ಡಿ ಮಿಷನ್ ಹುದ್ದೆಗೆ ರಾಜೀನಾಮೆ ನೀಡಿದ್ದರು. ಇದೀಗ ಈ ಸ್ಥಾನಕ್ಕೆ 2012 ಲಂಡನ್​ ಒಲಿಂಪಿಕ್ಸ್​ ಟೂರ್ನಿಯಲ್ಲಿ 10 ಮೀ. ಏರ್​ ರೈಫಲ್​ ಸ್ಫರ್ದೆಯಲ್ಲಿ ಕಂಚಿನ ಪದಕ ಗೆದ್ದಿದ್ದ ಗಗನ್​ ನಾರಂಗ್​ ಅವರನ್ನು ಆಯ್ಕೆ ಮಾಡಲಾಗಿದೆ. ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ​​(ಐಒಎ) ಅಧ್ಯಕ್ಷೆ ಪಿಟಿ ಉಷಾ ಅಧಿಕೃತ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

‘ಎರಡು ಒಲಿಂಪಿಕ್ಸ್ ಪದಕಗಳನ್ನು ಗೆದ್ದ ಭಾರತದ ಏಕೈಕ ಮಹಿಳೆಯಾಗಿರುವ ಸಿಂಧು ಅವರು ಆರಂಭಿಕ ಸಮಾರಂಭದಲ್ಲಿ ಶರತ್ ಕಮಲ್ ಅವರೊಂದಿಗೆ ಮಹಿಳಾ ಧ್ವಜಧಾರಿಯಾಗಿ ಘೋಷಿಸಲು ಸಂತೋಷಪಡುತ್ತೇನೆ. ಪ್ಯಾರಿಸ್ 2024ರ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಉತ್ತಮ ಫಲಿತಾಂಶಗಳನ್ನು ನೀಡಲು ನಮ್ಮ ಕ್ರೀಡಾಪಟುಗಳು ಉತ್ತಮವಾಗಿ ಸಿದ್ಧರಾಗಿದ್ದಾರೆ ಎಂದು ನನಗೆ ವಿಶ್ವಾಸವಿದೆ’ಎಂದು ಪಿಟಿ ಉಷಾ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!