ಹೊಸ ದಿಗಂತ, ಮಂಗಳೂರು:
ಭಾನುವಾರ ರಾತ್ರಿ ಹಾಗೂ ಸೋಮವಾರ ಸುರಿದ ಪ್ರಳಯಾಂತಕ ಮಳೆಗೆ ತತ್ತರಿಸಿ ಹೋಗಿದ್ದ ಉಡುಪಿ ನಗರ ಮಂಗಳವಾರ ಸಹಜ ಸ್ಥಿತಿಗೆ ಮರಳುತ್ತಿದೆ.
ಮಂಗಳವಾರ ಮಳೆಯ ತೀವ್ರತೆ ಕ್ಷೀಣಿಸಿದ್ದು, ಪ್ರವಾಹ ಪರಿಸ್ಥಿತಿ ಆತಂಕದಿಂದ ಜನತೆ ದೂರವಾಗಿದ್ದಾರೆ. ಉಡುಪಿ ನಗರದ ವಿವಿಧ ಕಡೆಗಳಲ್ಲಿ ಕಾಣಿಸಿಕೊಂಡಿರುವ ಮಳೆ ನೀರು ಇಳಿಮುಖವಾಗುತ್ತಿದ್ದು, ಜನತೆ ನೆಮ್ಮದಿಯ ನಿಟ್ಟುಸಿರಿಟ್ಟಿದ್ದಾರೆ.
ಕಳೆದ ಕೆಲವು ದಿನಗಳಿಂದ ಸುರಿಯುತ್ತಿದ್ದ ಮಳೆ ಭಾನುವಾರ ರಾತ್ರಿಯ ಬಳಿಕ ವೇಗ ಪಡೆದುಕೊಂಡು ಸೋಮವಾರ ಹಲವು ಅಧ್ವಾನಗಳಿಗೆ ಕಾರಣವಾಗಿತ್ತು. ಉಡುಪಿ ನಗರವಲ್ಲದೆ ಜಿಲ್ಲೆಯ ಹಲವೆಡೆಗಳಲ್ಲಿ ಮಳೆಯಿಂದ ಅಸ್ತಿ ಪಾಸ್ತಿಗಳಿಗೆ ಅಪಾರ ಉಂಟಾಗಿತ್ತು.