ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಪ್ಲಾಟ್ಫಾರ್ಮ್ನಲ್ಲಿ ನಿಂತಿದ್ದ ಮಹಿಳೆ ತಲೆ ತಿರುಗಿ ರೈಲ್ವೆ ಹಳಿಗೆ ಬಿದ್ದ ಪರಿಣಾಮ ಅವರ ಎರಡೂ ಕಾಲುಗಳು ಕಟ್ ಆಗಿದೆ.
ಮಹಾರಾಷ್ಟ್ರದ ಮುಂಬೈನ ಬೇಲಾಪುರ ರೈಲು ನಿಲ್ದಾಣದಲ್ಲಿ ಈ ಅವಘಡ ಸಂಭವಿಸಿದೆ. ಇನ್ನೇನು ರೈಲು ಪಾಸಾಗಬೇಕು ಎನ್ನುವಷ್ಟರಲ್ಲಿ ಮಹಿಳೆ ಪ್ಲಾಟ್ಫಾರ್ಮ್ನಿಂದ ಹಳಿಗೆ ಬಿದ್ದಿದ್ದಾರೆ. ಹಳಿಗೆ ಬಿದ್ದ ಇವರ ಮೇಲೆ ರೈಲು ಚಲಿಸಿದ್ದು, ಮಹಿಳೆಯ ಎರಡೂ ಕಾಲುಗಳು ಕಟ್ ಆಗಿದೆ.
ಮಾಹಿತಿಯ ಪ್ರಕಾರ, ಪನ್ವೇಲ್ನಿಂದ ರೈಲ್ವೆ ಸ್ಟೇಷನ್ಗೆ ಹೋಗುತ್ತಿದ್ದಾಗ ಬೇಲಾಪುರ ಸಿಬಿಡಿ ರೈಲು ನಿಲ್ದಾಣದಲ್ಲಿ ರೈಲಿಗಾಗಿ ಕಾಯುತ್ತಿದ್ದ ಮಹಿಳೆಯೊಬ್ಬರು ಕಾಲು ಜಾರಿ ರೈಲು ಹಳಿ ಮೇಲೆ ಬಿದ್ದಿದ್ದಾರೆ. ಅಷ್ಟರಲ್ಲಿ ರೈಲಿನ ಮೊದಲ ಮಹಿಳಾ ಕೋಚ್ ಆಕೆಯನ್ನು ದಾಟಿ ಹೋಯಿತು. ಇದು ಪ್ರಯಾಣಿಕರು ಮತ್ತು ರೈಲ್ವೆ ಆಡಳಿತದಲ್ಲಿ ಆತಂಕ ಮೂಡಿಸಿತು. ನಂತರ ರೈಲ್ವೆ ಪೈಲಟ್ ರೈಲನ್ನು ಹಿಂದಕ್ಕೆ ಸರಿಸಿದ್ದರಿಂದ ಆ ಮಹಿಳೆಯ ಪ್ರಾಣ ಉಳಿಯಿತು. ಆದರೆ ಆ ಮಹಿಳೆಯ ಎರಡೂ ಕಾಲುಗಳು ಕಟ್ ಆಗಿವೆ.
ಘಟನೆಗೆ ಸಂಬಂಧಿಸಿದಂತೆ ಸೆಂಟ್ರಲ್ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಸ್ವಪ್ನಿಲ್ ನೀಲ್ ಟ್ವಿಟ್ ಮಾಡಿದ್ದು, ಟ್ರ್ಯಾಕ್ಗೆ ಬಿದ್ದ ಮಹಿಳೆಯನ್ನು ರಕ್ಷಿಸುವುದಕ್ಕಾಗಿ ಬೇಲಾಪುರ ರೈಲು ನಿಲ್ದಾಣದ ಪ್ಲಾಟ್ಫಾರ್ಮ್ 3ರಲ್ಲಿ ಪನ್ವೇಲ್ನಿಂದ ಥಾಣೆಯತ್ತ ಹೊರಟ ರೈಲನ್ನು ರಿವರ್ಸ್ ಮಾಡಲಾಯ್ತು ಹಾಗೂ ಮಹಿಳೆಯನ್ನು ಸಮೀಪದ ಎಂಜಿಎಂ ಆಸ್ಪತ್ರೆಗೆ ದಾಖಲಿಸಲಾಯ್ತು. ರೈಲು ಆಕೆಯ ಮೇಲೆ ಚಲಿಸಿರುವುದರಿಂದ ಆಕೆಗೆ ಗಂಭೀರ ಗಾಯಗಳಾಗಿವೆ ಎಂದು ಮಾಹಿತಿ ನೀಡಿದ್ದಾರೆ.