ಬೆಂಗಳೂರಿನ ಉತ್ತರಾದಿ ಮಠದಲ್ಲಿ ಜುಲೈ 17ರಂದು ಮುದ್ರಾ ಧಾರಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರಿನ ಉತ್ತರಾದಿ ಮಠದಲ್ಲಿ ಜುಲೈ 17ರಂದು ಮುದ್ರಾ ಧಾರಣೆ ನಡೆಯಲಿದೆ.

ಪರಮ ಪೂಜ್ಯ ಶ್ರೀ ಸತ್ಯಾತ್ಮ ತೀರ್ಥ ಸ್ವಾಮೀಜಿ ಅವರು ಜುಲೈ 17ರಂದು ಆಶಾಡ ಪ್ರಥಮ ಏಕಾದಶಿ ಅಂಗವಾಗಿ ಬೆಂಗಳೂರಿನ ಬಸವನಗುಡಿಯ ಪಂಪ ಮಹಾಕವಿ ರಸ್ತೆಯಲ್ಲಿರುವ ಶ್ರೀ ಉತ್ತರಾದಿ ಮಠದಲ್ಲಿ ಬೆಳಗ್ಗೆ 6 ರಿಂದ ರಾತ್ರಿ 11ರ ವರೆಗೆ ಭಕ್ತರಿಗೆ ತಪ್ತಮದ್ರಾ ಧಾರಣೆಯನ್ನು ಮಾಡಲಿದ್ದಾರೆ.

ಮಧ್ಯಾಹ್ನ 12 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಗುರುಗಳು ಸಂಸ್ಥಾನ ಪೂಜೆಯನ್ನು ನೆರವೇರಿಸಲಿದ್ದಾರೆ. ನಂತರ ಮುದ್ರಾ ಧಾರಣೆ ಪ್ರಕ್ರಿಯೆ ಮುಂದುವರಿಯಲಿದೆ. ರಾಜ್ಯದ ವಿವಿಧ ಭಾಗಗಳಿಂದ 40,000ಕ್ಕೂ ಹೆಚ್ಚು ಭಕ್ತರು ಆಗಮಿಸಿ ಮುದ್ರೆಯನ್ನು ಪಡೆಯಲಿದ್ದಾರೆ . ಇದಕ್ಕಾಗಿ ಶ್ರೀಮಠವು ಸಕಲ
ವ್ಯವಸ್ಥೆಯನ್ನು ಮಾಡಿಕೊಳ್ಳುತ್ತಿದೆ ಎಂದು ಶ್ರೀ ಮಠದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ, ಪಂಡಿತ ಗುತ್ತಲ ವಿದ್ಯಾಧೀಶ ಆಚಾರ್ಯ ತಿಳಿಸಿದ್ದಾರೆ.

15 ರಂದೂ ಮುದ್ರೆ ಲಭ್ಯ:
ಅನೇಕ ಭಕ್ತರ ಅಪೇಕ್ಷೆಯ ಮೇರೆಗೆ ಜುಲೈ 15ರಂದು ಸಹಾ ಬೆಂಗಳೂರಿನ ಉತ್ತರಾದಿ ಮಠದಲ್ಲಿ ಬೆಳಗ್ಗೆ ಏಳರಿಂದ
ಬೆಳಗ್ಗೆ ಹತ್ತು ಮೂವತ್ತರವರೆಗೆ ಭಕ್ತರಿಗೆ ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ ಅವರು ಮುದ್ರಾ ಧಾರಣೆಯನ್ನು ಮಾಡಲಿದ್ದಾರೆ, ವೃದ್ಧರಿಗೆ , ಅಶಕ್ತರಿಗೆ ಅಂಗವಿಕಲರಿಗೆ , ದೂರದ ಜಿಲ್ಲೆ, ಹೊರ ರಾಜ್ಯದವರು ಮತ್ತು ವಿವಿಧ ಸಮಸ್ಯೆಗಳಿಂದ ಬಳಲುತ್ತಿರುವ ಭಕ್ತರಿಗೆ ಈ ಅವಕಾಶವನ್ನು ಮೀಸಲಿಡಲಾಗಿದೆ ಎಂದು ಶ್ರೀ ಮಠದ ಪ್ರಕಟಣೆ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!