ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಸ್ಸಾಂನಲ್ಲಿ ಪ್ರವಾಹದಿಂದಾಗಿ ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ಇದುವರೆಗೆ ಒಂಬತ್ತು ಘೇಂಡಾಮೃಗಗಳು ಸೇರಿದಂತೆ 159 ಕಾಡು ಪ್ರಾಣಿಗಳು ಸಾವನ್ನಪ್ಪಿವೆ ಎಂದು ಉದ್ಯಾನವನ ಪ್ರಾಧಿಕಾರ ತಿಳಿಸಿದೆ.
ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಫೀಲ್ಡ್ ಡೈರೆಕ್ಟರ್ ಸೋನಾಲಿ ಘೋಷ್ ಮಾತನಾಡಿ, ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ಇದುವರೆಗೆ “159 ಕಾಡು ಪ್ರಾಣಿಗಳಲ್ಲಿ, 128 ಜಿಂಕೆಗಳು, 9 ಘೇಂಡಾಮೃಗಗಳು, 2 ಜೌಗು ಜಿಂಕೆಗಳು ಪ್ರವಾಹದ ನೀರಿನಲ್ಲಿ ಮುಳುಗಿ ಸಾವನ್ನಪ್ಪಿವೆ” ಎಂದು ಸೋನಾಲಿ ಘೋಷ್ ಹೇಳಿದರು.
ಉದ್ಯಾನದ ಪ್ರಾಧಿಕಾರ ಮತ್ತು ಅರಣ್ಯ ಇಲಾಖೆಯು ಪ್ರವಾಹದ ಸಮಯದಲ್ಲಿ 133 ಪ್ರಾಣಿಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದೆ ಮತ್ತು 111 ಪ್ರಾಣಿಗಳನ್ನು ಚಿಕಿತ್ಸೆ ನಂತರ ಬಿಡುಗಡೆ ಮಾಡಲಾಗಿದೆ. ಎರಡು ಘೇಂಡಾಮೃಗಗಳು ಮತ್ತು ಎರಡು ಆನೆ ಮರಿಗಳು ಸೇರಿದಂತೆ ರಕ್ಷಿಸಲಾದ ಏಳು ಪ್ರಾಣಿಗಳು ಈಗ ಚಿಕಿತ್ಸೆಯಲ್ಲಿವೆ ಎಂದು ಸೋನಾಲಿ ಘೋಷ್ ಹೇಳಿದ್ದಾರೆ.