ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೆಲೆಬ್ರಿಟಿ ಮ್ಯಾನೇಜರ್ ದಿಶಾ ಸಾಲಿಯಾನ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಭಾರತೀಯ ಜನತಾ ಪಕ್ಷದ ಶಾಸಕ ನಿತೇಶ್ ರಾಣೆಗೆ ನೋಟಿಸ್ ಜಾರಿ ಮಾಡಿದ್ದು, ಜೂನ್ 12 ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.
ಇದೇ ವೇಳೆ ನಿತೇಶ್ ರಾಣೆ, ದಿಶಾ ನಿಗೂಢ ಸಾವಿನ ಕುರಿತು ಸಾಕ್ಷ್ಯಾಧಾರಗಳನ್ನು ನೀಡುವುದಾಗಿ ಹೇಳಿದ್ದಾರೆ.
“ನಾನು ಈಗಷ್ಟೇ ಸಮನ್ಸ್ ಸ್ವೀಕರಿಸಿದ್ದೇನೆ ಮತ್ತು ಇದು ಕೊಲೆಯ ಪ್ರಕರಣ ಎಂದು ನಾನು ಮೊದಲ ದಿನದಿಂದಲೂ ಹೇಳುತ್ತಿದ್ದೇನೆ. ನಾನು ಮುಂಬೈ ಪೊಲೀಸರೊಂದಿಗೆ ಸಹಕರಿಸಲು ಸಿದ್ಧನಿದ್ದೇನೆ. MVA ಸರ್ಕಾರವು ಮುಚ್ಚಿಡಲು ಮತ್ತು ಆದಿತ್ಯ ಠಾಕ್ರೆ ಮತ್ತು ಅವರ ಇತರ ಸ್ನೇಹಿತರನ್ನು ಉಳಿಸಲು ಬಯಸಿದೆ … ನನ್ನ ಬಳಿ ಏನೇ ಮಾಹಿತಿ ಇದ್ದರೂ ಅದನ್ನು ಪೊಲೀಸರಿಗೆ ನೀಡಲು ನಾನು ಸಿದ್ಧ, ”ಎಂದು ಅವರು ಹೇಳಿದ್ದಾರೆ.