ಹೊಸದಿಗಂತ ಡಿಜಿಟಲ್ ಡೆಸ್ಕ್:
ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಬಗ್ಗೆ ‘ಕಾಟೇರ’ ಚಿತ್ರದ ನಿರ್ದೇಶಕ ತರುಣ್ ಸುಧೀರ್ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
ಏನು ಹೇಳಬೇಕೆಂದು ನನಗೆ ಗೊತ್ತಿಲ್ಲ. ರೇಣುಕಾ ಸ್ವಾಮಿ ಅವರ ಕುಟುಂಬದ ಬಗ್ಗೆ ನೋವಿದೆ. ಈ ಘಟನೆ ನಡೆಯಬಾರದಿತ್ತು. ನಮ್ಮ ಕುಟುಂಬವೂ ಇಲ್ಲೇ ಇದೆ. ನನ್ನ ಸಹೋದರನಷ್ಟೇ ನೋವು ನನಗೂ ಇದೆ. ದರ್ಶನ್ ಅವರದ್ದು ತಪ್ಪು ಇಲ್ಲ ಅಂತಲೇ ಹೊರಗೆ ಬರಬಹುದಲ್ಲ ಎಂಬ ನಂಬಿಕೆ ನನ್ನದು. ಇದಲ್ಲದೆ, ಕಾನೂನು ಇದೆ. ತನಿಖೆ ಸರಿಯಾಗಿ ನಡೆಯುತ್ತದೆ. ಹಾಗಾಗಿ ವೈಯಕ್ತಿಕವಾಗಿ ನಾನು ಈ ಬಗ್ಗೆ ಏನನ್ನೂ ಹೇಳಲಾರೆ. ದರ್ಶನ್ ಮೇಲೆ ಅವಲಂಬಿತವಾಗಿರುವ ಅವರ ಕುಟುಂಬಕ್ಕೂ ಇದು ನೋವು ತಂದಿದೆ ಎಂದು ತರುಣ್ ಸುಧೀರ್ ಹೇಳಿದ್ದಾರೆ.