ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿಗೆ ಬಿಡುವಷ್ಟು ನೀರು ಕರ್ನಾಟಕದ ಜಲಾಶಯಗಳಲ್ಲಿ ಇಲ್ಲ. ಹೆಚ್ಚು ಮಳೆಗಾಗಿ ಪ್ರಾರ್ಥಿಸೋಣ ಎಂದು ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ ಅವರು, ನಮ್ಮಲ್ಲಿ ನೀರಿಲ್ಲ. ಮಳೆ ಇಲ್ಲ. ಮಳೆಗಾಗಿ ಪ್ರಾರ್ಥಿಸೋಣ. ನಮ್ಮಲ್ಲಿ ಕೆರೆಗಳು ತುಂಬಿಸಲು ಕೂಡ ನೀರಿಲ್ಲ. ಕಾವೇರಿ ಜಲಾನಯರ ಪ್ರದೇಶದ ಜಲಾಶಯಗಳ ಒಳಹರಿವು ಕಡಿಮೆ ಇದೆ ಎಂದು ಹೇಳಿದರು.
ದೆಹಲಿಯಲ್ಲಿ ಗುರುವಾರ CWRC ಯ 99ನೇ ಸಭೆ ನಡೆದಿದ್ದು, ಸಭೆಯಲ್ಲಿ ಜುಲೈ 12 ರಿಂದ ಜುಲೈ 31ರ ವರೆಗೆ ಬಿಳಿಗುಂಡ್ಲುವಿನಲ್ಲಿ ಸಂಚಿತ ನೀರಿನ ಹರಿವನ್ನು ದಿನಕ್ಕೆ 1 ಟಿಎಂಸಿ (ಸರಾಸರಿ 11,500 ಕ್ಯುಸೆಕ್ಸ್ ಹರಿವು) ಇರುವಂತೆ ಕರ್ನಾಟಕವು ತನ್ನ ಜಲಾಶಯಗಳಿಂದ ನೀರಿನ ಬಿಡುಗಡೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ.