ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿನ್ನೆ ನಟಿ, ನಿರೂಪಕಿ ಅಪರ್ಣಾ ವಸ್ತಾರೆ ಕ್ಯಾನ್ಸರ್ನಿಂದಾಗಿ ಕೊನೆಯುಸಿರೆಳೆದಿದ್ದಾರೆ. ಇಂದು ಬೆಂಗಳೂರಿನ ಅವರ ನಿವಾಸದಲ್ಲಿಯೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿದ್ದು, ಹಿರಿಯ ನಟ ಶ್ರೀನಾಥ್ ಅಂತಿಮ ದರ್ಶನ ಪಡೆದು ಮಾತನಾಡಿದ್ದಾರೆ.
ಆಯಸ್ಸು ಜಾಸ್ತಿ ಆದಷ್ಟು ಜಾಸ್ತಿ ಸಾವುಗಳನ್ನು ನೋಡುತ್ತಿದ್ದೇವೆ. ಇವರನ್ನು ಮಗು ಆದಾಗಿನಿಂದ ನೋಡುತ್ತಿದ್ದೆ. ಅಪರ್ಣಾ ಅವರ ಎಂಥಾ ಒಳ್ಳೆಯ ಸಂಸ್ಕಾರ ಇತ್ತು. ಅವರ ಮಾತು, ಸ್ಪಷ್ಟ ಕನ್ನಡ ಹಾಗೂ ಪದಗಳ ಬಳಕೆಯನ್ನು ಯಾರೂ ಮರೆಯೋದಕ್ಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.