ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡದ ನಿರೂಪಕಿ ಅಪರ್ಣಾ ನಿಧನದ ಬಗ್ಗೆ ನಟ ಸೃಜನ್ ಲೋಕೇಶ್ ಸಂತಾಪ ಸೂಚಿಸಿದ್ದಾರೆ. ನಟಿಯ ಅಂತಿಮ ದರ್ಶನದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ಅಪರ್ಣಾ ಇನ್ನಿಲ್ಲ ಅನ್ನೋ ನೋವು ಯಾವಾಗಲೂ ಕಾಡುತ್ತಲೇ ಇರುತ್ತದೆ ಎಂದು ಸೃಜನ್ ಮಾತನಾಡಿದ್ದಾರೆ.
ಅಪರ್ಣಾ ನಿಧನ ನಿಜಕ್ಕೂ ಬೇಸರ ಆಗಿದೆ. ಪುಟ್ಟಣ್ಣ ಕಣಗಲ್ ನಿರ್ದೇಶನದಲ್ಲಿ ಅಪರ್ಣಾ ನಟಿಸಿದ್ದಾರೆ. ನಾವು ಯಾವಾಗಲೂ ಅವರಿಗೆ ರೇಗಿಸುತ್ತಿದ್ವಿ. ಊರು ಹುಟ್ಟೋಕ್ಕೂ ಮುಂಚೆ ಹುಟ್ಟಿದವರು ನೀವು ಅಂತ. ಅಂದಿನ ಕಾಲದಿಂದಲೂ ಆ್ಯಕ್ಟಿಂಗ್ ಮಾಡ್ತಿದ್ದಾರೆ. ಎಷ್ಟೊಂದು ವರ್ಷಗಳ ಸಾಧನೆ ಅವರದ್ದು. ನಮ್ಮ ಚಿತ್ರರಂಗದಲ್ಲಿ ಲೆಜೆಂಡರಿ ಕಲಾವಿದೆ ಅಪರ್ಣಾ ಎಂದು ಸೃಜನ್ ಲೋಕೇಶ್ ಭಾವುಕರಾಗಿದ್ದಾರೆ.