ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾಯಾನಗರಿ ಮುಂಬೈ ನಲ್ಲಿ ಮದುವೆ ಸಂಭ್ರಮ. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಅದ್ಧೂರಿ ವಿವಾಹಕ್ಕೆ ಬಾಲಿವುಡ್ ತಾರೆಯರ ದಂಡೇ ತೆರಳುತ್ತಿದ್ದಾರೆ. ಆದ್ರೆ ನಟ ಅಕ್ಷಯ್ ಕುಮಾರ್ ಅವರು ಈ ಅದ್ಧೂರಿ ವಿವಾಹ ಸಮಾರಂಭಕ್ಕೆ ಗೈರಾಗುತ್ತಿದ್ದಾರೆ. ಕಳೆದ ಎರಡು ದಿನಗಳಿಂದ ಅಕ್ಷಯ್ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದೀಗ ಅಕ್ಷಯ್ ಕುಮಾರ್‌ಗೆ ಕೋವಿಡ್ 19 ಸೋಂಕು ದೃಢಪಟ್ಟಿದೆ.
ಸದ್ಯ ನಟ ಇತ್ತೀಚಿನ ಬಿಡುಗಡೆಯಾದ ‘ಸರ್ಫಿರಾ’ ಪ್ರಚಾರಕ್ಕಾಗಿ ಪ್ರಯಾಣಿಸುತ್ತಿದ್ದಾರೆ. ಹೀಗಾಗಿ ನಟ ಸ್ವತಃ ಪರೀಕ್ಷೆಗೆ ಒಳಗಾದರು. ಬಳಿಕ ಕೋವಿಡ್ 19 ಸೋಂಕು ಇರುವುದು ಖಚಿತವಾಗಿದೆ. ಇದೀಗ ನಟ ಮನೆಯಲ್ಲಿಯೇ ಕ್ವಾರಂಟೈನ್‌ನಲ್ಲಿದ್ದಾರೆ. ವೈದ್ಯರಗಳು ಸೂಕ್ತ ಚಿಕಿತ್ಸೆಯೊಂದಿಗೆ ನಿಗಾವಹಿಸಿ ಆರೈಕೆ ಮಾಡುತ್ತಿದ್ದಾರೆ.
ವರದಿಯ ಪ್ರಕಾರ, ಜುಲೈ 12ರ ಬೆಳಗ್ಗೆ ಕೋವಿಡ್ ಇರುವುದು ಪತ್ತೆಯಾಗಿದೆ. ಹೀಗಾಗಿ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಸಮಾರಂಭದಲ್ಲಿ ಭಾಗಿಯಾಗುತ್ತಿಲ್ಲ.
ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹವು ಮೂರು ದಿನಗಳವರೆಗೆ ಇರುತ್ತದೆ. ಜುಲೈ 12 ರಂದು ‘ಶುಭ ವಿವಾಹ’, ಜುಲೈ 13 ರಂದು ‘ಶುಭ್ ಆಶೀರ್ವಾದ್’ ಮತ್ತು ಜುಲೈ 14 ರಂದು ʻಆರತಕ್ಷತೆ, ನಂತರ ಜುಲೈ 15 ರಂದು ಮತ್ತೊಂದು ಆರತಕ್ಷತೆ ಕಾರ್ಯಕ್ರಮ ನಡೆಯಲಿವೆ.
ಜಾನ್ ಸೆನಾ, ಮೈಕ್ ಟೈಸನ್, ಜೀನ್-ಕ್ಲಾಡ್ ವ್ಯಾನ್ ಡ್ಯಾಮ್ ಮತ್ತು ಜೇ ಶೆಟ್ಟಿ, ಬೋರಿಸ್ ಜಾನ್ಸನ್, ಟೋನಿ ಬ್ಲೇರ್, ಜಾನ್ ಕೆರ್ರಿ ಮತ್ತು ಸ್ಟೀಫನ್ ಹಾರ್ಪರ್ ಅವರಂತಹ ಗಣ್ಯರು ಸೇರಿದಂತೆ ಇತರ ಸೆಲೆಬ್ರಿಟಿಗಳು ಸಮಾರಂಭದಲ್ಲಿ ಇರಲಿದ್ದಾರೆ.