ಹೊಸದಿಗಂತ ಹಾಸನ :
ಕಾಫಿ ತೋಟದ ಮಾಲಿಕನ ಮೇಲೆ ಡೆಡ್ಲಿ ಅಟ್ಯಾಕ್ ಮಾಡಲು ಮುಂದಾದ ಒಂಟಿ ಕಾಡಾನೆ, ಹತ್ತಿರದ ದಾಸ್ತಾನು ಕೊಠಡಿಯ ಮೇಲೆ ಹತ್ತಿ ಜೀವ ಉಳಿಸಲು ಹರ ಸಾಹಸ ಪಟ್ಟ ದೃಶ್ಯಗಳು ಸಿಸಿ ಕ್ಯಾಮರ ದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿಯ ಕಡೇಗರ್ಜೆ ಗ್ರಾಮದ ಮಹೇಶ್ ಗೌಡರ ಎಂಬುವವರ ಮೇಲೆ ಒಂದು ವಾರದ ಹಿಂದೆ ಮಕನ ಎಂದು ಗುರುತಿಸಲಾದ ಒಂಟಿ ಕಾಡಾನೆಯೊಂದು ಕಾಫಿ ತೋಟದಿಂದ ವಾಪಸ್ಸು ಮನೆಗೆ ತೆರಳುತ್ತಿದ್ದ ವೇಳೆ ಬೆನ್ನಟ್ಟಿದೆ, ಅದರಿಂದ ಹರಸಾಹಸ ಪಟ್ಟು ತಪ್ಪಿಸಿಕೊಂಡ ಅವರು ಸ್ವಲ್ಪ ದೂರದಲ್ಲಿ ಇದ್ದ ದಾಸ್ತಾನು ಕೊಠಡಿಯ ಮೇಲೇರಿ ತನ್ನ ಪ್ರಾಣವನ್ನು ಉಳಿಸಿಕೊಂಡಿದ್ದಾರೆ. ಪ್ರಾಣಿ ಪಕ್ಷಿಗಳ ಬಗ್ಗೆ ಅಪಾರ ಪ್ರೀತಿ ಹೊಂದಿರುವ ಅವರು ಕೈಮುಗಿದು ಪ್ರಾರ್ಥಿಸುವ ದೃಶ್ಯವೂ ಕ್ಯಾಮೆರಾದಲ್ಲಿ ಸೆರೆಯಾಗಿದೆ, ಸುಮಾರು ಅರ್ಧ ಘಂಟೆಗಳ ಕಾಲ ಕಾಡನೆಯು ಮನೆಯ ಸುತ್ತಲೂ ಸುತ್ತುತ್ತಾ ಕೆಲಗಿಳಿಯಲೆಂದು ಕಾದು ಓಡಾಡುತ್ತಿತ್ತು ನಂತರ ಅಲ್ಲಿಯೇ ನಿಟ್ಟುಸಿರು ಬಿಡುತ್ತಿದ ಅವರು ಸ್ಥಳೀಯರಿಗೆ ಕರೆ ಮಾಡಿದ್ದರಿಂದ ಕೆಲವು ಹೊತ್ತಿನಲ್ಲಿ ಸ್ಥಳೀಯರು ಬಂದ ನಂತರ ಕೇಳಿಗಿಳಿದು ಬಂದಿದ್ದಾರೆ.
ಇದಲ್ಲದೆ ಅಲ್ಲಿಂದ ಕಾಲ್ಕಿತ್ತ ಕಾಡಾನೆ ಬೇಲೂರು ಮುಖ್ಯ ರಸ್ತೆಯಲ್ಲಿ ಅಲ್ಲಿ ಇಲ್ಲಿ ಓಡಾಡುತ್ತ ರಸ್ತೆಯಲ್ಲಿ
ಸಂಚರಿಸುತ್ತಿದ್ದ ಮಹಿಳೆಯನ್ನು ಸಹ ಬೆನ್ನಟ್ಟಿದೆ. ಇದಾದ ಬಳಿಕ ಸುಮಾರು ಅರ್ಧ ಘಂಟೆಗಳ ಕಾಲ ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಹಾಗೂ ಜಿಲ್ಲಾ ಆನೆ ಕಾರ್ಯ ಪಡೆ ಸಿಬ್ಬಂದಿಗಳು ಪಟಾಕಿ ಹೊಡೆದು ಬೇರೆಡೆ ಓಡಿಸಿ ಸಂಚಾರಕ್ಕೆ ಅನುವು ಮಾಡಿ ಕೊಟ್ಟಿರುತ್ತಾರೆ .
ಇಂತಹ ಘಟನೆಗಳನ್ನು ನೋಡಿದರೆ ಆನೆ ಇರುವ ಮಲೆನಾಡಿಗರ ಬದುಕು ಎಂತಹ ಕಠಿಣವಾಗಿದೆ ಎಂದು ಅರ್ಥವಾಗುತ್ತೆ, ಇದಕ್ಕೆ ಶಾಶ್ವತ ನಿಯಂತ್ರಣಕ್ಕೆ ಸರ್ಕಾರ ಯಾವಾಗ ಯೋಜನೆ ರೂಪಿಸುತ್ತೋ ಕಾದು ನೋಡಬೇಕಿದೆ ಎಂದು ಸ್ಥಳೀಯರು ಅಸಮಧಾನ ಹೊರಹಾಕಿದ್ದಾರೆ.