ಹಲಸಿನ ಬೀಜದ ಹೋಳಿಗೆ ಮಾಡಲು ಬೇಕಾಗುವ ಸಾಮಗ್ರಿಗಳು
ಒಂದು ಕಪ್ ನಷ್ಟು ಸಿಪ್ಪೆ ತೆಗೆದ ಹಲಸಿನ ಹಣ್ಣಿನ ಬೀಜ
ಬೆಳ್ತಿಗೆ ಅಕ್ಕಿ
ಬೆಲ್ಲ
ತೆಂಗಿನಕಾಯಿ ತುರಿ
ಏಲಕ್ಕಿ ಪುಡಿ
ಅರಿಶಿನ ಪುಡಿ
ತುಪ್ಪ ಹಾಗೂ ರುಚಿಗೆ ತಕ್ಕಷ್ಟು ಉಪ್ಪು.
ಹಲಸಿನ ಬೀಜದ ಹೋಳಿಗೆ ಮಾಡುವ ವಿಧಾನ
ಮೊದಲು ಅಕ್ಕಿಯನ್ನು ಮೂರು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ ರುಬ್ಬಿಕೊಳ್ಳಿ. ಹಲಸಿನ ಬೀಜಗಳಿಗೆ ಒಂದೂವರೆ ಕಪ್ ನೀರು ಸೇರಿಸಿ ಚೆನ್ನಾಗಿ ಕುದಿಸಿ. ಬೆಂದ ಬೀಜವನ್ನು ಮಿಕ್ಸಿ ಜಾರಿಗೆ ಹಾಕಿ ಬೆಲ್ಲ, ಉಪ್ಪು, ತೆಂಗಿನಕಾಯಿ ತುರಿ, ಏಲಕ್ಕಿ ಪುಡಿ, ಅರಿಶಿನ ಪುಡಿ ಸೇರಿಸಿ ಗಟ್ಟಿಯಾಗಿ ರುಬ್ಬಿಕೊಳ್ಳಿ, ಆ ಬಳಿಕ ಕೈಗೆ ಎಣ್ಣೆ ಸವರಿಕೊಂಡು ಹಲಸಿನ ಬೀಜದ ಹೂರಣ ಉಂಡೆಗಳನ್ನಾಗಿ ಮಾಡಿಕೊಳ್ಳಿ. ಇದನ್ನು ರುಬ್ಬಿಟ್ಟ ಅಕ್ಕಿ ಹಿಟ್ಟಿನಲ್ಲಿ ಅದ್ದಿಕೊಂಡು ಕಾದ ಕಾವಲಿನ ಮೇಲೆ ಸ್ವಲ್ಪ ತುಪ್ಪ ಹಾಕಿ ಬೇಯಿಸಿಕೊಂಡರೆ ರುಚಿ ರುಚಿಯಾದ ಹಲಸಿನ ಬೀಜದ ಹೋಳಿಗೆ ಸವಿಯಲು ಸಿದ್ಧ.