ಡೆಲ್ಲಿ ಕ್ಯಾಪಿಟಲ್ಸ್ ನಿಂದ ರಿಕಿ ಪಾಂಟಿಂಗ್ ಗೆ ಕೊಕ್!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಐಪಿಎಲ್ ಮುಂದಿನ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮುಖ್ಯ ಕೋಚ್ ಆಗಿ ರಿಕಿ ಪಾಂಟಿಂಗ್ ಕಾರ್ಯನಿರ್ವಹಿಸುವುದಿಲ್ಲ ಎಂದು ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಖಚಿತಪಡಿಸಿದ್ದಾರೆ.

ಆಸ್ಟ್ರೇಲಿಯಾದ ಮಾಜಿ ನಾಯಕ 2018 ರಿಂದ ಡೆಲ್ಲಿ ಕ್ಯಾಪಿಟಲ್ಸ್ ಮುಖ್ಯ ಕೋಚ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಏಳು ವರ್ಷದ ಸೇವೆಯ ಬಳಿಕ ಅವರು ನಿರ್ಗಮಿಸಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್​ಗೆ ಸೇರುವ ಮೊದಲು,ಮುಂಬೈ ಇಂಡಿಯನ್ಸ್​​​ ತಂಡ ಮುಖ್ಯ ತರಬೇತುದಾರರಾಗಿ ಸೇವೆ ಸಲ್ಲಿಸಿದ್ದರು.

ರಿಕಿ ಪಾಂಟಿಂಗ್ ಅವರ ಅಧಿಕಾರಾವಧಿಯಲ್ಲಿ, ದೆಹಲಿ ಮೂಲದ ಫ್ರಾಂಚೈಸಿ ಮೊದಲ ಬಾರಿಗೆ ಐಪಿಎಲ್​​ನ ಫೈನಲ್​ಗೆ ಅರ್ಹತೆ ಪಡೆಯಿತು. ಆದರೆ ಟ್ರೋಫಿಯನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಇತ್ತೀಚಿನ ಋತುಗಳಲ್ಲಿ ಡೆಲ್ಲಿಯ ಪ್ರದರ್ಶನವು ತುಂಬಾ ನಿರಾಶಾದಾಯಕವಾಗಿದೆ. ಈ ವರ್ಷದ ಐಪಿಎಲ್​​ನಲ್ಲಿ ಡಿಸಿ 7 ಗೆಲುವು ಮತ್ತು ಸೋಲುಗಳೊಂದಿಗೆ ಆರನೇ ಸ್ಥಾನದಲ್ಲಿದೆ. ವಾಸ್ತವವಾಗಿ, ಅವರು 2022 ರಿಂದ ಪ್ಲೇಆಫ್​​ಗೆ ಅರ್ಹತೆ ಪಡೆಯಲು ಸಾಧ್ಯವಾಗಿಲ್ಲ.

ತಂಡದ ಅದೃಷ್ಟವನ್ನು ಬದಲಾಯಿಸುವ ಪ್ರಯತ್ನದಲ್ಲಿ ನಿರಾಸೆ ಮೂಡಿಸಿದ ರಿಕಿ ಪಾಂಟಿಂಗ್ ಅವರನ್ನು ಮುಂದುವರಿಸದೇ ಇರಲು ಫ್ರಾಂಚೈಸಿ ನಿರ್ಧರಿಸಿದೆ ಎಂದು ಸೌರವ್ ಗಂಗೂಲಿ ಇದನ್ನು ದೃಢಪಡಿಸಿದ್ದಾರೆ. ಮುಖ್ಯ ಕೋಚ್ ಆಗಿ ತಮ್ಮ 7 ವರ್ಷಗಳ ಅಧಿಕಾರಾವಧಿಯಲ್ಲಿ ಪಾಂಟಿಂಗ್ ತಂಡವನ್ನು ಮುನ್ನಡೆಸಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದ್ದಾರೆ.

ಗಂಗೂಲಿ ಅವರು ಮುಂದಿನ ವರ್ಷ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದ್ದಾರೆ ಮತ್ತು ಜವಾಬ್ದಾರಿಯನ್ನು ತೆಗೆದುಕೊಳ್ಳಲು ಸಿದ್ಧರಿದ್ದಾರೆ ಎಂದು ಹೇಳಿದ್ದಾರೆ.

ನಾನು ಮುಂದಿನ ವರ್ಷದ ಐಪಿಎಲ್​ ಬಗ್ಗೆ ಯೋಜಿಸಬೇಕಾಗಿದೆ. ನಾನು ಡೆಲ್ಲಿ ಕ್ಯಾಪಿಟಲ್ಸ್ ಪರ ಒಮ್ಮೆ ಐಪಿಎಲ್ ಗೆಲ್ಲಲು ಬಯಸುತ್ತೇನೆ. ಮೆಗಾ ಹರಾಜು ಮುಂದಿನ ವರ್ಷ ಇದೆ, ಆದ್ದರಿಂದ ನಾನು ಈಗಿನಿಂದಲೇ ಯೋಜಿಸಲು ಪ್ರಾರಂಭಿಸಿದ್ದೇನೆ ಎಂದು ಸೌರವ್ ಗಂಗೂಲಿ ಹೇಳಿದ್ದಾರೆ.

ಐಪಿಎಲ್ 2019 ಕ್ಕೆ ಮುಂಚಿತವಾಗಿ ಗಂಗೂಲಿ ಡೆಲ್ಲಿ ತಂಡ ಸೇರಿದ್ದರು. ಅಂದಿನಿಂದ ಪಾಂಟಿಂಗ್ ಅವರ ಅಡಿಯಲ್ಲಿ ಎರಡನೇ ಕಮಾಂಡ್ ಆಗಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!