ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಇತ್ತಿಚೇಗೆ ಕಾಶ್ಮೀರದ ನೌಶೇರಾ-ರಾಜೌರಿ ವಲಯದಲ್ಲಿ ಪಾಕಿಸ್ತಾನದ ಡ್ರೋನ್‌ಗಳು ಪತ್ತೆಯಾದ ವಿಚಾರಕ್ಕೆ ಸಂಬಂಧಿಸಿದಂತೆ ಭಾರತ ಆಕ್ಷೇಪ ವ್ಯಕ್ತಪಡಿಸಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಹೇಳಿದ್ದಾರೆ.
ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ದ್ವಿವೇದಿ, ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ಡಿಜಿಎಂಓಗಳ ಮಟ್ಟದಲ್ಲಿನ ಸಭೆಯಲ್ಲಿ ಭಾರತ ಆಕ್ಷೇಪ ವ್ಯಕ್ತಪಸಿದೆ ಎಂದು ಹೇಳಿದರು.
ಪಾಕಿಸ್ತಾನದಿಂದ ಬರುತ್ತಿರುವ ಡ್ರೋನ್ ಚಟುವಟಿಕೆಗಳ ಬಗ್ಗೆ ಗಂಭೀರ ಆತಂಕ ವ್ಯಕ್ತಪಡಿಸಿದರು. ಇತ್ತೀಚಿಗೆ ಜಮ್ಮು-ಕಾಶ್ಮೀರದ ನೌಶೇರಾ-ರಾಜೌರಿ ಸೆಕ್ಟರ್‌ನಲ್ಲಿ ಪಾಕಿಸ್ತಾನದ ಡ್ರೋನ್‌ಗಳು ಕಂಡುಬಂದಿದ್ದಕ್ಕೆ ಸಂಬಂಧಿಸಿದಂತೆ ಡಿಜಿಎಂಓಗಳ ಸಭೆಯಲ್ಲಿ ಆಕ್ಷೇಪಗಳನ್ನು ತಿಳಿಸಲಾಯಿತು ಎಂದು ಹೇಳಿದರು.
ಭಾರತೀಯ ಸೇನೆಯು ಕ್ಷಿಪಣಿ ಮತ್ತು ರಾಕೆಟ್ ಪಡೆಯನ್ನು ಸಿದ್ಧಪಡಿಸುತ್ತಿದೆ. ನಮ್ಮ ಭದ್ರತಾ ಪಡೆಗಳು ಮೇ 10 ರಿಂದ 31 ಭಯೋತ್ಪಾದಕರನ್ನು ನಿರ್ಮೂಲನೆ ಮಾಡಿರುವುದರಿಂದ ಪಶ್ಚಿಮ ಫ್ರಂಟ್ ಮತ್ತು ಜಮ್ಮು ಮತ್ತು ಕಾಶ್ಮೀರ ಸೂಕ್ಷ್ಮವಾಗಿದ್ದರೂ ಸಂಪೂರ್ಣವಾಗಿ ನಿಯಂತ್ರಿಸಲ್ಪಟ್ಟಿವೆ ಎಂದು ಹೇಳಿದರು.
2025 ರಲ್ಲಿ ಭದ್ರತಾ ಪಡೆಗಳು 31 ಭಯೋತ್ಪಾದಕರನ್ನು ನಿರ್ಮೂಲನೆ ಮಾಡಿವೆ. ಅವರಲ್ಲಿ ಶೇ. 65 ರಷ್ಟು ಜನರು ಪಾಕಿಸ್ತಾನದಿಂದ ಬಂದವರು. ಇದರಲ್ಲಿ ಆಪರೇಷನ್ ಮಹಾದೇವ್‌ನಲ್ಲಿ ಪಹಲ್ಗಾಮ್ ದಾಳಿಯ ಮೂವರು ಅಪರಾಧಿಗಳನ್ನು ತಟಸ್ಥಗೊಳಿಸಲಾಗಿದೆ ಎಂದು ತಿಳಿಸಿದರು.


