ಅನಂತ್ ಅಂಬಾನಿಯ ಮದುವೆಗೆ ಬಂದ ಸ್ಟಾರ್ಸ್‌ಗೆ ಸಿಕ್ಕಿದೆ ಕೋಟಿ ಮೌಲ್ಯದ ಗಿಫ್ಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಂಬಾನಿ ಮನೆ ಮಗನ ಮದುವೆ ಅದ್ಧೂರಿಯಾಗಿ ನಡೆದಿದೆ. ಈ ಮದುವೆಯಲ್ಲಿ ಬಾಲಿವುಡ್ ಸೆಲೆಬ್ರಿಟಿಗಳ ದಂಡೇ ಹಾಜರಿ ಹಾಕಿದೆ. ಅನಂತ್‌ ಮದುವೆಗೆ ಬಂದ ಸ್ಟಾರ್ಸ್‌ಗೆ ಅಂಬಾನಿ ದುಬಾರಿ ವಾಚ್ ಅನ್ನು ರಿಟರ್ನ್ ಗಿಫ್ಟ್ ಮಾಡಿದ್ದಾರೆ.

ಜುಲೈ 12ರ ಶುಕ್ರವಾರ ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಮದುವೆ ಅದ್ಧೂರಿಯಾಗಿ ನಡೆದಿದ್ದು, ಇದಕ್ಕೆ ಬಾಲಿವುಡ್ ತಾರೆಯರು, ಕ್ರಿಕೆಟಿಗರು ಸೇರಿದಂತೆ ದೇಶ-ವಿದೇಶದ ಗಣ್ಯರು ಭಾಗಿಯಾಗಿದ್ದರು. ಜುಲೈ 13ರಂದು ಆಶೀರ್ವಾದ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಇದೀಗ ಮದುವೆ ನಂತರದ ಕಾರ್ಯಕ್ರಮಗಳು ಶುರುವಾಗಿವೆ.

ಅಂಬಾನಿ ಕುಟುಂಬ ಮದುವೆಯ ಮೊದಲ ಆಮಂತ್ರಣ ಪತ್ರಿಕೆಯನ್ನು ಕಾಶಿ ವಿಶ್ವನಾಥನ ಮುಂದೆ ಇರಿಸಿ ಪೂಜೆ ಮಾಡಿಸಿದ್ದರು. ನಂತರ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಸೇರಿದಂತೆ ಪ್ರಮುಖ ಗಣ್ಯರ ಮನೆಗೆ ತೆರಳಿ ಆಹ್ವಾನ ನೀಡಲಾಗಿತ್ತು. ದೂರದ ಗಣ್ಯರಿಗೆ ಆಹ್ವಾನ ನೀಡಿ, ಅವರಿಗೆ ಬರುವ ವ್ಯವಸ್ಥೆಯನ್ನು ಅಂಬಾನಿ ಕುಟುಂಬವೇ ಮಾಡಿದೆ. ಮದುವೆಗೆ ಆಗಮಿಸಿದ ಅನಂತ್ ಅಂಬಾನಿಯ 25 ಕುಚಿಕು ಗೆಳೆಯರಿಗೆ ಕೋಟಿ ಕೋಟಿ ಮೌಲ್ಯದ ಗಿಫ್ಟ್ ಸಿಕ್ಕಿದೆ.

ದುಬಾರಿ ಬೆಲೆಯ ಗಿಫ್ಟ್ ನೀಡಿರುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಮತ್ತು ವಿಡಿಯೋಗಳು ವೈರಲ್ ಆಗುತ್ತಿವೆ. ವರದಿಗಳ ಪ್ರಕಾರ, ವರ ಅನಂತ್ ತನ್ನ 25 ಅತ್ಯಾಪ್ತರಿಗೆ ಲಿಮಿಟೆಡ್ ಎಡಿಷನ್ Audemard Piguet ಕೈಗಡಿಯಾರ ನೀಡಿದ್ದಾರೆ ಎನ್ನಲಾಗಿದೆ. ವಿಶೇಷವಾಗಿ ಆರ್ಡರ್ ಕೊಟ್ಟು ಒಟ್ಟು 25 ವಾಚ್‌ಗಳನ್ನು ತರಿಸಲಾಗಿತ್ತು. ಒಂದೊಂದು ವಾಚ್ ಬೆಲೆ 1.5 ರಿಂದ 2 ಕೋಟಿ ರೂಪಾಯಿ ಆಗಿದೆ ಎನ್ನಲಾಗಿದೆ. ಅಂಬಾನಿ ಕುಟುಂಬದ ಸೂಚನೆಯ ಮೇರೆಗೆ ವಿಶೇಷವಾಗಿ ಈ ವಾಚ್‌ಗಳನ್ನು ತಯಾರಿಸಲಾಗಿದೆ ಎಂದು ವರದಿಯಾಗಿದೆ.

18 ಕ್ಯಾರಟ್ ಚಿನ್ನದಿಂದ ಈ ವಾಚ್ ತಯಾರಿಸಲಾಗಿದೆ. ಈ ವಾಚ್ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಮೂಲಗಳ ಪ್ರಕಾರ ಈ ವಿಶೇಷ ಕೈಗಡಿಯಾರವನ್ನು ಮಿಜಾನ್ ಜಾಫರಿ, ವೀರ್ ಪಹಾಡಿಯಾ, ಶಿಖರ್ ಫಹಾಡಿಯಾ, ಶಾರೂಖ್‌ ಖಾನ್, ರಣ್‌ವೀರ್ ಸಿಂಗ್, ಹಾರ್ದಿಕ್ ಪಾಂಡ್ಯ ಸೇರಿದಂತೆ ಅತ್ಯಾಪ್ತರಿಗೆ ಮಾತ್ರ ನೀಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!