ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಂಬಾನಿ ಪುತ್ರನ ವಿವಾಹದಲ್ಲಿ ಇಡೀ ಕ್ರಿಕೆಟರ್ಸ್ ಹಾಗೂ ಬಾಲಿವುಡ್ ಭಾಗಿಯಾಗಿತ್ತು. ಆದರೆ ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಎಲ್ಲಿಯೂ ಕಾಣಿಸಿಲ್ಲ. ಅನುಷ್ಕಾ ಈಗಷ್ಟೇ ಸುಪುತ್ರನನ್ನು ಪಡೆದಿದ್ದು, ಅವನ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ. ವಿರಾಟ್‌ಗೆ ಇನ್ವೈಟ್ ಸಿಕ್ಕಿದೆ, ಆದರೆ ಅವರೇ ಕಾರ್ಯಕ್ರಮಕ್ಕೆ ಬಂದಿಲ್ಲ.
ಭಾರತೀಯ ಕ್ರಿಕೆಟ್ ಕಂಡ ಸೂಪರ್ ಸ್ಟಾರ್ಗಳೆಲ್ಲಾ ಅಂಬಾನಿ ಪುತ್ರನ ಅದ್ಧೂರಿ ವಿವಾಹದಲ್ಲಿ ಮಸ್ತಿ ಮಾಡಿದ್ರೆ, ವಿರಾಟ್ ಕೊಹ್ಲಿ ದೇವರ ಧ್ಯಾನದಲ್ಲಿ ಮಗ್ನರಾಗಿದ್ರು. ಪತ್ನಿ ಅನುಷ್ಕಾ ಶರ್ಮಾ ಜೊತೆಗೆ ಲಂಡನ್ನ ಯುನಿಯನ್ ಚಾಪೆಲ್ನಲ್ಲಿ ನಡೆದ ಕೀರ್ತನೆ ಕಾರ್ಯಕ್ರಮದಲ್ಲಿ ಕೊಹ್ಲಿ ಭಾಗಿಯಾಗಿದ್ದಾರೆ.
ಬಾರ್ಬಡೋಸ್ನಲ್ಲಿ ವಿಶ್ವಕಪ್ ಗೆದ್ದ ಬಳಿಕ ಬಂದು ವಿಜಯೋತ್ಸವ ಕಾರ್ಯಕ್ರಮದಲ್ಲಿ ವಿರಾಟ್ ಕೊಹ್ಲಿ ಭಾಗಿಯಾಗಿದ್ರು. ಬಳಿಕ ಮರುದಿನವೇ ಲಂಡನ್ಗೆ ಹಾರಿದ್ರು. ಪತ್ನಿ, ಮಕ್ಕಳೊಂದಿಗೆ ವಿರಾಟ್ ವಿಶ್ರಾಂತಿ ದಿನ ಕಳೆಯುತ್ತಿದ್ದಾರೆ. ಇದ್ರ ನಡುವೆ ಕೃಷ್ಣದಾಸ್ ನಡೆಸಿಕೊಡೋ ಕೀರ್ತನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಕೃಷ್ಣನ ಕೀರ್ತನೆಗಳನ್ನ ಆಲಿಸಿ ಆಧ್ಯಾತ್ಮಿಕ ಲೋಕದಲ್ಲಿ ಮೈ ಮರೆತಿದ್ದಾರೆ. ಈ ಕೀರ್ತನೆಯನ್ನು ವಿರಾಟ್ ಯಾವ ವರ್ಷವೂ ಕೂಡ ಮಿಸ್ ಮಾಡೋದೇ ಇಲ್ಲ.