ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಗಲಕೋಟೆ ಜಮಖಂಡಿ ತಾಲೂಕಿನ ಆಲಗೂರ ಗ್ರಾಮದ ಚಂದ್ರಾದೇವಿ ದೇವಸ್ಥಾನದ ದ್ವಾರಬಾಗಿಲಿನಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದೆ.
ದ್ವಾರ ಬಾಗಲಿನ ಕಲ್ಲು ತಲೆ ಮೇಲೆ ಬಿದ್ದು ತರಕಾರಿ ಮಾರುತ್ತಿದ್ದ ಮಹಿಳೆ ಸಾವನ್ನಪ್ಪಿದ್ದಾಳೆ. ಸುರೇಖಾ ಕಂಬಾರ (44) ಸಾವಿಗೀಡಾದ ಮಹಿಳೆ.
ದೇವಾಲಯದ ಬಳಿಯಿದ್ದ ಮಂಗಗಳು ಅತ್ತಿಂದಿತ್ತ ಓಡಾಟ ನಡೆಸುತ್ತಿದ್ದವು. ಈ ವೇಳೆ ದ್ವಾರ ಬಾಗಿಲಿಗೆ ಮಂಗವೊಂದು ಛಂಗನೇ ಜಿಗಿದಿದೆ. ಮಂಗ ಜಿಗಿಯುತ್ತಿದ್ದಂತೆಯೇ ದ್ವಾರಬಾಗಿಲಿನಲ್ಲಿ ಸಿಮೆಂಟ್ ಕಲ್ಲು ಸುರೇಖಾ ತಲೆ ಮೇಲೆ ಬಿದ್ದಿದೆ.
ಪರಿಣಾಮ ಸುರೇಖಾ ನೆಲಕ್ಕೆ ಬಿದ್ದಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಸುರೇಖಾ ತಲೆಯಿಂದ ತೀವ್ರ ರಕ್ತಸ್ರಾವ ಉಂಟಾಗಿದೆ. ಸುರೇಖಾ ತರಕಾರಿ ಮುರುತ್ತಿದ್ದ ಜಾಗದಲ್ಲೇ ಉಸಿರು ಚೆಲ್ಲಿದ್ದಾರೆ. ಜಮಖಂಡಿ ಗ್ರಾಮಿಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದುರ್ಘಟನೆ ನಡೆದಿದೆ.