ಜುಲೈ 26 ರಿಂದ ಪ್ಯಾರಿಸ್ ಒಲಿಂಪಿಕ್ಸ್: ಈ ಎರಡು ದೇಶಕ್ಕೆ ನೋ ಎಂಟ್ರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇದೇ ಜುಲೈ 26 ರಿಂದ ಪ್ಯಾರಿಸ್ ಒಲಿಂಪಿಕ್ಸ್ ಪ್ರಾರಂಭವಾಗುತ್ತಿದೆ. ಬರೋಬ್ಬರಿ 206 ದೇಶಗಳಿಂದ 10,500 ಕ್ರೀಡಾಪಟುಗಳು ಆಗಮಿಸುತ್ತಿದ್ದಾರೆ. ಇದರಲ್ಲಿ ಭಾರತದಿಂದ ತೆರಳಿರುವ 120 ಕ್ರೀಡಾಪಟುಗಳು ಸೇರಿದ್ದಾರೆ.

ಜುಲೈ 26 ರ ಉದ್ಘಾಟನಾ ಸಮಾರಂಭದೊಂದಿಗೆ ಆರಂಭವಾಗಿರುವ ಈ ಕ್ರೀಡಾಕೂಟ ಆಗಸ್ಟ್ 11 ರವರೆಗೆ ನಡೆಯಲಿದೆ. ಹೀಗಾಗಿ ಈ ಕ್ರೀಡೆಯಲ್ಲಿ ಭಾಗವಹಿಸುತ್ತಿರುವ ಎಲ್ಲಾ ದೇಶಗಳ ಅಭಿಮಾನಿಗಳ ದೃಷ್ಟಿ ಇದೀಗ ಪ್ಯಾರಿಸ್​ನತ್ತ ನೆಟ್ಟಿದೆ. ಅದಾಗ್ಯೂ ಈ ಕ್ರೀಡಾಕೂಟದಲ್ಲಿ 2 ಪ್ರಮುಖ ದೇಶಗಳ ಆಟಗಾರರು ಭಾಗವಹಿಸಲು ರಾಷ್ಟ್ರೀಯ ಒಲಿಂಪಿಕ್ ಸಮಿತಿ ಅನುಮೋದನೆ ನೀಡಿಲ್ಲ.

ಈ ಬಾರಿ 206 ದೇಶಗಳ ಕ್ರೀಡಾಪಟುಗಳು ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ ಭಾಗವಹಿಸುತ್ತಿದ್ದಾರೆ. ಆದರೆ ಈ ಬಾರಿ ರಷ್ಯಾ ಮತ್ತು ಬೆಲಾರಸ್‌ ದೇಶಗಳಿಗೆ ತಮ್ಮ ತಂಡಗಳನ್ನು ಒಲಿಂಪಿಕ್ಸ್‌ಗೆ ಕಳುಹಿಸಲು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಅನುಮೋದನೆ ನೀಡಿಲ್ಲ. ಆದಾಗ್ಯೂ, ಈ ದೇಶಗಳ ಆಟಗಾರರು ತಟಸ್ಥ ಕ್ರೀಡಾಪಟುಗಳಾಗಿ ಭಾಗವಹಿಸಬಹುದು. ಹಾಗೆಯೇ ಈ ಆಟಗಾರರು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ. ಆದರೆ ಈ ಎರಡು ದೇಶಗಳ ಆಟಗಾರರು ಚಿನ್ನದ ಪದಕ ಗೆದ್ದರೇ ತಮ್ಮ ತಮ್ಮ ರಾಷ್ಟ್ರದ ರಾಷ್ಟ್ರಧ್ವಜ ಹಾರಿಸುವಂತಿಲ್ಲ.

ಈ ಎರಡು ರಾಷ್ಟ್ರಗಳಿಗ್ಯಾಕೆ ನಿಷೇಧ?
ಉಕ್ರೇನ್‌ನಲ್ಲಿ ನಡೆಯುತ್ತಿರುವ ಯುದ್ಧದ ಕಾರಣ, ಎರಡೂ ದೇಶಗಳಿಗೆ ಒಲಿಂಪಿಕ್ಸ್‌ನಲ್ಲಿ ಟೀಮ್ ಈವೆಂಟ್‌ಗಳಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿಲ್ಲ. ಆದರೆ ವೈಯಕ್ತಿಕ ವಿಭಾಗದಲ್ಲಿ ಆಟಗಾರರು ಒಲಿಂಪಿಕ್ಸ್‌ನಲ್ಲಿ ತಟಸ್ಥವಾಗಿ ಭಾಗವಹಿಸಬಹುದು. ಆದರೆ ಅವರು ಉಕ್ರೇನ್‌ನಲ್ಲಿ ನಡೆಯುತ್ತಿರುವ ಯುದ್ಧವನ್ನು ಬೆಂಬಲಿಸುವಂತಹ ಯಾವುದೇ ಚಟುವಟಿಕೆಯನ್ನು ನಡೆಸುವಂತಿಲ್ಲ. ಇದರ ಹೊರತಾಗಿ, ಅವರು ತಮ್ಮ ತಮ್ಮ ದೇಶಗಳ ಸೇನೆ ಅಥವಾ ಭದ್ರತಾ ಪಡೆಗಳೊಂದಿಗೆ ಸಂಪರ್ಕದಲ್ಲಿರುವಂತಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!