ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆಜಿಎಫ್-2 ನಂತರ ನಟ ಯಶ್ ಸಿನಿಮಾದ ಬಗ್ಗೆ ಅಭಿಮಾನಿಗಳು ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ಯಶ್ ಮುಂದಿನ ಚಿತ್ರಕ್ಕಾಗಿ ಕಾಯುತ್ತಿದ್ದಾರೆ.
ಕನ್ನಡ ಚಿತ್ರರಂಗ ಮಾತ್ರವಲ್ಲ, ಇಡೀ ವಿಶ್ವವೇ ಯಶ್ ಚಿತ್ರಕ್ಕಾಗಿ ಕಾತರದಿಂದ ಕಾಯುತ್ತಿದೆ. ಇದೀಗ ನಟ ಯಶ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಜು. 26 ರಂದು ‘ಯಶ್ ಸಿನಿಮಾ ರಿ-ರಿಲೀಸ್ ಆಗಲಿದೆ. ಹೌದು, ನಟ ಯಶ್ ಅಭಿನಯದ ರಾಜಾಹುಲಿ ಚಿತ್ರ ಮತ್ತೆ ತೆರೆಗೆ ಬರಲಿದೆ.
ಈ ಚಿತ್ರದಲ್ಲಿ ಯಶ್, ಮೇಘನಾ ರಾಜ್, ಚಿಕ್ಕಣ್ಣ, ವಸಿಷ್ಟ ಸಿಂಹ ಸೇರಿದಂತೆ ಹಲವರು ನಟಿಸಿದ್ದಾರೆ. ರಾಜಾಹುಲಿ ಚಿತ್ರವು ನವೆಂಬರ್ 1, 2013 ರಂದು ಬಿಡುಗಡೆಯಾಗಿತ್ತು. ಮಂಡ್ಯದ ಸೊಗಡಿನ ಹಳ್ಳಿ ಚಿತ್ರವು ಸ್ಯಾಂಡಲ್ವುಡ್ನಲ್ಲಿ ಕಮಾಲ್ ಮಾಡಿದ್ದು ಜುಲೈ 26 ರಂದು ಮತ್ತೆ ಬಿಡುಗಡೆಯಾಗಲಿದೆ.