Tuesday, January 13, 2026
Tuesday, January 13, 2026
spot_img

‘ಆಪರೇಷನ್ ಗ್ಯಾಂಗ್ ಬಸ್ಟ್’ ಕಾರ್ಯಾಚರಣೆ: 48 ಗಂಟೆಗಳಲ್ಲಿ 280 ದರೋಡೆಕೋರರು ಅರೆಸ್ಟ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ರಾಷ್ಟ್ರ ರಾಜಧಾನಿ ಪೊಲೀಸರು ನಡೆಸಿದ ‘ಆಪರೇಷನ್ ಗ್ಯಾಂಗ್ ಬಸ್ಟ್ 2026’ ಹೆಸರಿನಲ್ಲಿ ಕಾರ್ಯಾಚರಣೆಯಲ್ಲಿ 48 ಗಂಟೆಗಳಲ್ಲಿ 280 ದರೋಡೆಕೋರರನ್ನು ಬಂಧಿಸಿದ್ದಾರೆ.

ಕಾರ್ಯಾಚರಣೆಯ ಸಮಯದಲ್ಲಿ 6,400ಕ್ಕೂ ಹೆಚ್ಚು ಶಂಕಿತರನ್ನು ಪರಿಶೀಲನೆ ನಡೆಸಿ ವಿಚಾರಣೆ ನಡೆಸಲಾಗಿದೆ. ಹಲವಾರು ಗ್ಯಾಂಗ್‌ಗಳಿಗೆ ಸೇರಿದ 280 ದರೋಡೆಕೋರರನ್ನು ಬಂಧಿಸಿದ್ದಾರೆ. ಈ ಮೂಲಕ ಬಂಧಿತರ ಸಂಖ್ಯೆ 854ಕ್ಕೆ ಏರಿಕೆಯಾಗಿದೆ.

ಕಾರ್ಯಾಚರಣೆಯ ಭಾಗವಾಗಿ, 9,000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ದೆಹಲಿ, ಪಂಜಾಬ್, ಹರಿಯಾಣ, ಹಿಮಾಚಲ ಪ್ರದೇಶ ಮತ್ತು ಇತರ ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿಗಳನ್ನು ನಡೆಸಲಾಗಿದೆ.

ಗ್ಯಾಂಗ್ ಸದಸ್ಯರು, ಅವರ ಸಹಚರರು ಮತ್ತು ಅಪರಾಧ ಕೃತ್ಯಗಳಿಗೆ ಸಹಕರಿಸುವವರನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ. ಬಂಧಿತರಲ್ಲಿ ಕೊಲೆ, ಕೊಲೆ ಯತ್ನ, ಸುಲಿಗೆ, ದರೋಡೆ ಮತ್ತು ಶಸ್ತ್ರಾಸ್ತ್ರ ಅಪರಾಧಗಳ ಪ್ರಕರಣಗಳಲ್ಲಿ ಬೇಕಾಗಿರುವವರಿದ್ದಾರೆ. ಅಲ್ಲದೇ ಹಲವಾರು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವವರು ಮತ್ತು ತಲೆಮರೆಸಿಕೊಂಡವರು ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸರು ಗುರುತಿಸಿದ್ದ 4,299 ಅಡಗುತಾಣಗಳ ಮೇಲೆ ದಾಳಿ ನಡೆಸಿ, 690 ಹೊಸ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿದ್ದಾರೆ. ದಾಳಿಯ ವೇಳೆ ಸುಮಾರು 300 ಅಕ್ರಮ ಶಸ್ತ್ರಾಸ್ತ್ರಗಳು, 130 ಸುತ್ತಿನ ಮದ್ದುಗುಂಡುಗಳು ಮತ್ತು ಸುಮಾರು 25 ಲಕ್ಷ ರೂ. ನಗದು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Most Read

error: Content is protected !!