ಹೊಸದಿಗಂತ ಡಿಜಿಟಲ್ ಡೆಸ್ಕ್:
ದರ್ಶನ್ ಪ್ರಕರಣದ ಕುರಿತು ನಟ ರಾಜ್ ಬಿ ಶೆಟ್ಟಿ ಕೂಡ ರಿಯಾಕ್ಟ್ ಮಾಡಿದ್ದಾರೆ. ದರ್ಶನ್ ಸರ್ ತಪ್ಪು ಮಾಡಿದ್ರೆ ಶಿಕ್ಷೆಯಾಗಲಿ. ಜೈಲಿನಿಂದ ಹೊರ ಬಂದ ಮೇಲೆ ದರ್ಶನ್ ಅವರು ಹೊಸ ವ್ಯಕ್ತಿಯಾಗಿ ಬರಲಿ ಎಂದು ಹೇಳಿದ್ದಾರೆ.
ದರ್ಶನ್ ಘಟನೆ ನಿಜಕ್ಕೂ ಚಿತ್ರರಂಗಕ್ಕೆ ಎಫೆಕ್ಟ್ ಆಗಿದೆ. ಇದರಿಂದ ನಮ್ಮ ಇಮೇಜ್ ಕೂಡ ಚೇಂಜ್ ಆಗುತ್ತದೆ. ಚಿತ್ರರಂಗದಲ್ಲಿ ಎಲ್ಲರೂ ಸಂಬಂಧಿಕರೇ ಒಳ್ಳೆಯದು ಮಾಡಲಿ ಕೆಟ್ಟದು ಮಾಡಲಿ. ನಮ್ಮವರು ‘ಕೆಜಿಎಫ್’ ಹಾಗೆ ಸಿನಿಮಾ ಮಾಡಿದಾಗ ನಮಗೆ ಹೇಗೆ ಹೆಮ್ಮೆ ಅನಿಸುತ್ತದೆಯೋ ಹಾಗೆಯೇ ಒಬ್ಬರ ಮೇಲೆ ಈ ರೀತಿ ಆರೋಪ ಬಂದಾಗ ನಾವು ಕಷ್ಟ ಎದುರಿಸಬೇಕಾಗುತ್ತದೆ ಎಂದು ರಾಜ್ ಬಿ ಶೆಟ್ಟಿ ಮಾತನಾಡಿದ್ದಾರೆ.
ಸಿನಿಮಾದವರು ಅಂದಾಗ ಮೊದಲೇ ಹೆಣ್ಣು ಕೊಡಲ್ಲ. ಬಾಡಿಗೆಗೆ ಮನೆ ಕೊಡಲ್ಲ. ಈ ರೀತಿ ಎಲ್ಲಾ ನಡೆಯುತ್ತಿದೆ ಎಂದಿದ್ದಾರೆ. ಈ ಘಟನೆ ಚಿತ್ರರಂಗಕ್ಕೆ ದೊಡ್ಡ ಹೊಡೆತ. ಈ ತಪ್ಪು ಆಗಿದ್ರೆ ಅಂದರೆ ಕಾನೂನು ಎಲ್ಲರಿಗೂ ಒಂದೇ ಇದರಲ್ಲಿ ತಾರತಮ್ಯ ಇಲ್ಲ. ಒಂದು ವೇಳೆ, ದರ್ಶನ್ ಅವರಿಂದ ಅಪರಾಧ ಆಗಿದ್ರೆ ಶಿಕ್ಷೆಯಾಗಬೇಕು. ಇಲ್ಲ ಅಂದರೆ ರಿಲೀಸ್ ಆಗ್ತಾರೆ ಅಂತ ನಂಬಿದ್ದೀನಿ ಎಂದು ರಾಜ್ ಬಿ ಶೆಟ್ಟಿ ಹೇಳಿದರು.
ಥಿಯೇಟರ್‌ಗೆ ಜನ ಬರುತ್ತಿಲ್ಲ. ಜನ ಬರೋಕೆ ಸ್ವಲ್ಪ ಟೈಂ ಬೇಕಾಗುತ್ತದೆ. ಎಲ್ಲರಲ್ಲೂ ಗೊತ್ತಿದ್ದೋ ಅಥವಾ ಗೊತ್ತಿಲ್ದೆನೋ ಒಂದು ಕ್ರೂರತ್ವ ಇದ್ದೇ ಇರುತ್ತದೆ. ದರ್ಶನ್ ಸರ್ ಈ ಕೊಲೆ ಮಾಡಿದ್ದಾರೋ ಇಲ್ಲವೋ ನ್ಯಾಯಾಲಯದಲ್ಲಿ ತೀರ್ಮಾನ ಆಗುತ್ತದೆ. ಒಬ್ಬ ವ್ಯಕ್ತಿ ಒಂಟಿಯಾಗಿ ನಿಂತಾಗ ಅವರು ತಪ್ಪು ಮಾಡಿಲ್ಲ ಅಂದರು ಪಶ್ಚಾತಾಪ ಅನುಭವಿಸ್ತಿರುತ್ತಾರೆ. ಅವರಿಗೂ ಹಾಗೇ ಆಗಿರುತ್ತದೆ ಎಂದಿದ್ದಾರೆ.
ರೇಣುಕಾಸ್ವಾಮಿ ಕುಟುಂಬ ನೋಡಿದ್ರೆ ನೋವಾಗುತ್ತದೆ. ಕೆಲವರ ಸಹವಾಸದಿಂದ ಹೀಗೆ ಘಟನೆ ಆಗೋಗಿದೆ. ದರ್ಶನ್ ಸರ್ ಆಚೆ ಬಂದ ಮೇಲೆ ಹೊಸ ವ್ಯಕ್ತಿ ಆಗಿ ಬರಲಿ. ದರ್ಶನ್ ಸರ್ ಲೀಡರ್ ಆಗಿದವರು. ಅವರಿಗೂ ಈ ವಿಚಾರ ದುಃಖ ಆಗಿರುತ್ತದೆ ಎಂದು ರಾಜ್ ಬಿ ಶೆಟ್ಟಿ ಹೇಳಿದರು.