ಹೊಸದಿಗಂತ ವರದಿ, ಅಂಕೋಲಾ:
ತಾಲೂಕಿನ ಶಿರೂರಿನಲ್ಲಿ ಗುಡ್ಡ ಕುಸಿತವಾದ ಸ್ಥಳಕ್ಕೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಆಗಮಿಸಿದ್ದು ದುರಂತದಲ್ಲಿ ಸಿಲುಕಿರುವ ಜನರ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.
ಅರುಣ್ ದ್ವಿವೇದಿ ನೇತೃತ್ವದ 28 ಜನರ ತಂಡ ಗುಡ್ಡ ಕುಸಿತ ನಡೆದಿರುವ ಸ್ಥಳದಲ್ಲಿ ಕಾರ್ಯಾಚರಣೆಗೆ ಇಳಿದಿದ್ದು ,ಮಣ್ಣು ತೆರವು ಮತ್ತು ಮಣ್ಣಿನ ಅಡಿ ಸಿಲುಕಿರುವ ವಾಹನ ಮತ್ತು ಮೃತ ದೇಹಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಶಿರೂರು ಗುಡ್ಡ ಕುಸಿತದಿಂದಾಗಿ ಸುಮಾರು 15 ಜನರು ಕಣ್ಮರೆಯಾಗಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದ್ದು, ಹಲವು ವಾಹನಗಳು ಮತ್ತು ಜನರು ಮಣ್ಣಿನ ಅಡಿ ಸಿಲುಕಿರುವ ಸಾಧ್ಯತೆ ಇದೆ.