ಹೊಸ ದಿಗಂತ ವರದಿ,ಬೆಳಗಾವಿ :
ಮಂಗಳವಾರದಂದು ನಗರದಲ್ಲಿ ಸಂಜೆ 5.50 ಸುಮಾರಿಗೆ ಪ್ರಾರಂಭವಾದ ಅಕಾಲಿಕ ಮಳೆ ಅತೀ ರಬ್ಬಸದಿಂದ ಬಂದು ಸಕ್ರಾಂತಿ ಮುನ್ನವೇ, ಒಂದು ಘಂಟೆಗಳ ಕಲಾ ಸುರಿದ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತ ಉಂಟಾಗಿ ರಸ್ತೆ, ಗುಂಡಿಗಳಲ್ಲಿ ನೀರು ಸಂಚರಿಸಿ ಸಾರಿಗೆ, ಜನ ಸಂಚಾರ ಅಸ್ತವ್ಯಸ್ತಗೊಂಡಿತು.
ತಾಲೂಕಾ ಮಟ್ಟದಲ್ಲಿ ಇದ್ದೆ ರೀತಿ ಮಳೆ ಆದರೆ ರೈತಾಪಿ ವರ್ಗವು ಬೆಳೆದ 80% ಬೆಳೆ ಬಂದಿರುವ ಬಿಳಿ ಜೋಳಕ್ಕೆ ಈ ಮಳೆ ಮಾರಕ ಎನ್ನುತಿದ್ದಾರೆ ಕೃಷಿಕರ ಮುಂಗಾರು ಬೆಳೆಯಲ್ಲಿ ಅಪಾರ ಪ್ರಮಾಣದ ಮಳೆಯಿಂದ ಹಿನ್ನೆಡೆ ಅನುಭವಿಸುತ್ತಿರುವ ರೈತರಿಗೆ ಬಿಳಿ ಜೋಳ ಒಳ್ಳೆಯ ಬೆಳೆ ಬಂದಿರುವ ಪರಿಸ್ಥಿತಿಯಲ್ಲಿ ವಾಯುಭಾರ ಕುಸಿತದಿಂದ ಗ್ರಾಮೀಣ ಭಾಗದಲ್ಲಿ ಮಳೆಯಿಂದಾಗಿ ಕೈಗೆ ಬಂದಿರುವ ಬೆಳೆ ಅಕಾಲಿಕ ಮಳೆಯಿಂದ ಸಂಪೂರ್ಣ ಹಾನಿಯಾಗುವ ಸಾಧ್ಯತೆ ಇದೇ ಎನ್ನುತ್ತಾರು ರೈತರು. ಮೆಕ್ಕೆ ಜೋಳ, ಬಿಳಿ ಜೋಳ, ಸೇರಿದಂತೆ ಅನೇಕ ಬೆಳೆಗಳಿಗೆ ಈ ಮಳೆಯು ಹಾನಿಕಾರಕ ವಾಗಿದೆ.
ಅಲದೇ ಸಕ್ಕರೆ ಕಾರ್ಖಾನೆಗಳಿಗೆ ಪ್ರಸಕ್ತ ಕಬ್ಬು ರವಾನೆ ಆಗುತ್ತಿದ್ದು ಈ ರೈತರ ಕಾರ್ಯಕ್ಕೆ ಮಳೆರಾಯ ಅಡ್ಡಿ ಪಡಿಸುತ್ತಿದ್ದಾನೆ ಎಂದು ರೈತರು ಬೇಸರವನ್ನು ವ್ಯಕ್ತಪಡಿಸುತ್ತಿದ್ದಾರೆ.


