ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ 487 ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ 128 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ ರಾಜ್ಯದಲ್ಲಿ 358 ಸಕ್ರಿಯ ಪ್ರಕರಣಗಳ ಇವೆ.
ಕಳೆದ 24 ಗಂಟೆಗಳಲ್ಲಿ 4572 ಟೆಸ್ಟ್ ಮಾಡಿದ್ದು, ಇದರಲ್ಲಿ 487 ಮಂದಿಗೆ ಸೋಂಕು ದೃಢಪಟ್ಟಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 283, ಬೆಂಗಳೂರು ನಗರ 5, ಬೆಂ. ಗ್ರಾಮಾಂತರ 3, ರಾಮನಗರ 1, ಕೋಲಾರ 3, ತುಮಕೂರು 18, ಚಿತ್ರದುರ್ಗ 10, ದಾವಣಗೆರೆ 12, ಶಿವಮೊಗ್ಗ 9, ವಿಜಯಪುರ 2, ಧಾರವಾಡ 17, ಹಾವೇರಿ 12, ಉತ್ತರ ಕನ್ನಡ 5, ಕಲಬುರಗಿ 12 ಬೀದರ್ 3, ವಿಜಯನಗರ 16, ಕೊಪ್ಪಳ 6, ಮೈಸೂರು 5, ಚಾಮರಾಜನಗರ 4, ಮಂಡ್ಯ 6, ಹಾಸನ 26, ಉಡುಪಿ 12, ಚಿಕ್ಕಮಗಳೂರು 9, ಕೊಡಗು ಜಿಲ್ಲೆಯಲ್ಲಿ 8 ಪ್ರಕರಣ ಪತ್ತೆಯಾಗಿವೆ.
ಇನ್ನು ರಾಜ್ಯದಲ್ಲಿ ಜನವರಿಯಿಂದ ಈವರೆಗೆ ಒಟ್ಟು ಡೆಂಗ್ಯೂ ಪ್ರಕರಣಗಳ ಸಂಖ್ಯೆ 10449 ವರದಿಯಾಗಿದ್ದು, 8 ಮಂದಿ ಮೃತಪಟ್ಟಿದ್ದಾರೆ. ಸದ್ಯ ಡಂಗ್ಯೂ ಮರಣ ಪ್ರಮಾಣ ಶೇ. 0.07 ಇದೆ.