WONDERS | ಪ್ರಪಂಚದಲ್ಲಿ ಸೂರ್ಯ ಮುಳುಗದ ಸ್ಥಳಗಳು ಯಾವುವು ಎಂಬುದು ನಿಮಗೆ ಗೊತ್ತೇ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸೂರ್ಯ ಮುಳುಗಿದಾಗ ಮಾತ್ರ ರಾತ್ರಿಯಾಗುತ್ತದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಆದರೆ ಪ್ರಪಂಚದ ಕೆಲವು ದೇಶಗಳಲ್ಲಿ ಸೂರ್ಯ ಮುಳುಗೋದಿಲ್ಲ. ಅಲ್ಲಿ ವಾಸಿಸುವ ಜನರು ಅದಕ್ಕೆ ತಕ್ಕಂತೆ ಹಗಲು ರಾತ್ರಿಯನ್ನು ವಿಭಜಿಸಿಕೊಂಡಿದ್ದಾರೆ. ಇಲ್ಲಿ ಮಧ್ಯರಾತ್ರಿಯಲ್ಲೂ ಸೂರ್ಯನನ್ನು ನೋಡಬಹುದು.

ನಾರ್ವೆ
ನಾರ್ವೆಯಲ್ಲಿ ಕೂಡ ಸೂರ್ಯಾಸ್ತವಾಗುವುದಿಲ್ಲ. ಆರ್ಕ್ಟಿಕ್ ವೃತ್ತದಲ್ಲಿ ಅದರ ಸ್ಥಳದಿಂದಾಗಿ, ಮೇ ನಿಂದ ಜುಲೈ, ಅಂತ್ಯದವರೆಗೆ ಸರಿಸುಮಾರು 76 ದಿನಗಳವರೆಗೆ ನಾರ್ವೆಯಲ್ಲಿ ಸೂರ್ಯಾಸ್ತ ಸಂಭವಿಸುವುದಿಲ್ಲ.

ಸ್ಪೀಡನ್
ಮೇ ಆರಂಭದಿಂದ ಆಗಸ್ಟ್ ಅಂತ್ಯದವರೆಗೆ ಸೂರ್ಯನು ಸ್ವೀಡನ್ನಲ್ಲಿ ಮಧ್ಯರಾತ್ರಿಯ ಸುಮಾರಿಗೆ ಅಸ್ತಮಿಸುತ್ತಾನೆ ಮತ್ತು ಸುಮಾರು 4 ಗಂಟೆಗೆ ಉದಯಿಸುತ್ತಾನೆ.

ಫಿನ್‌ಲ್ಯಾಂಡ್
ಫಿನ್‌ಲ್ಯಾಂಡ್‌ ಉತ್ತರದ ಭಾಗಗಳಲ್ಲಿ ಮಧ್ಯರಾತ್ರಿಯಲ್ಲೂ ಸೂರ್ಯನನ್ನು ಸಹ ಕಾಣಬಹುದು. ಇಲ್ಲಿ ಬೇಸಿಗೆಯಲ್ಲಿ ಸುಮಾರು 73 ದಿನಗಳ ಕಾಲ ಸೂರ್ಯ ಮುಳುಗುವುದಿಲ್ಲ.

ಐಸ್‌ಲ್ಯಾಂಡ್
ಜೂನ್ ತಿಂಗಳಿನಲ್ಲಿ ಯುರೋಪಿನ ಈ ದ್ವೀಪ ದೇಶದಲ್ಲಿ ಬಹುತೇಕ ರಾತ್ರಿಯೇ ಇರುವುದಿಲ್ಲ. ಆಕಾಶದಲ್ಲಿ ದಿಗಂತದ ಮೇಲೆ ಸ್ವಲ್ಪ ಸಮಯದವರೆಗೆ ಸೂರ್ಯ ಅಸ್ತಮಿಸುವುದನ್ನು ನೋಡಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!