ಹೊಸದಿಗಂತ ಡಿಜಿಟಲ್ ಡೆಸ್ಕ್:
ಶ್ರೀಮಂತ ಮುಖೇಶ್ ಅಂಬಾನಿ ಕಿರಿಯ ಪುತ್ರ ಅನಂತ್ ಅಂಬಾನಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಜುಲೈ 12 ರಂದು ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ಅನಂತ್ ಅಂಬಾನಿ, ರಾಧಿಕಾ ಮರ್ಚೆಂಟ್ ಜೊತೆ ಸಪ್ತಪದಿ ತುಳಿದಿದ್ದಾರೆ. ಅದ್ದೂರಿ ಮದುವೆಗೆ ದೇಶ, ವಿದೇಶಗಳಿಂದ ದೊಡ್ಡ ದೊಡ್ಡ ಗಣ್ಯರು ಆಗಮಿಸಿದ್ದರು. ಇದೀಗ ಈ ಮದುವೆಯ ಕುರಿತಾಗಿ ಕಿರು ಚಿತ್ರ ಮಾಡೋದಕ್ಕೆ ನಿರ್ದೇಶಕ ಅಟ್ಲೀ ಮುಂದಾಗಿದ್ದಾರೆ.
ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಯ ಸಿನಿಮಾ ಕೂಡ ರೆಡಿಯಾಗಿದೆ. ಜನಪ್ರಿಯ ನಿರ್ದೇಶಕ ಅಟ್ಲೀ ಕುಮಾರ್10 ನಿಮಿಷಗಳ ಅನಿಮೇಷನ್ ಸಿನಿಮಾ ಮಾಡಿದ್ದಾರೆ ಎಂಬ ಸುದ್ದಿ ಬಂದಿದೆ.
ಅಟ್ಲೀ ಕುಮಾರ್ ಚಿತ್ರಕ್ಕೆ ನಿರ್ದೇಶ ನೀಡಿದ್ದಾರೆ. 10 ನಿಮಿಷಗಳ ಸಿನಿಮಾಗೆ ಬಿಗ್ಬಿ ಅಮಿತಾಬ್ ಬಚ್ಚನ್ ಹಿನ್ನೆಲೆ ಧ್ವನಿ ನೀಡಿದ್ದಾರೆ. ಇದೊಂದು ಕಿರುಚಿತ್ರವಾಗಿದೆ. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಯು ಜುಲೈ 12 ರಿಂದ 14 ರವರೆಗೆ ನಡೆಯಿತು. ಸುಮಾರು 5000 ಕೋಟಿ ರೂಪಾಯಿ ವೆಚ್ಚದಲ್ಲಿ ಮದುವೆ ಕಾರ್ಯಕ್ರಮ ನಡೆದಿದೆ.