ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೋಳಿ ಅಂಗಡಿಗೆ ಬಂದ ಕಾಗೆಯನ್ನು ಮಾಲೀಕರು ಹಗ್ಗದಿಂದ ಕಟ್ಟಿ ಹಾಕಿದ್ದು, ಕೆಲವೇ ಕ್ಷಣಗಳಲ್ಲಿ ನೂರಾರು ಕಾಗೆಗಳು ಕಿರುಚುತ್ತಾ ಅಂಗಡಿ ಹತ್ತಿರ ಬಂದಿವೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹೌದು. ಕಾಗೆಯೊಂದು ಕೋಳಿ ಅಂಗಡಿಗೆ ಆಹಾರ ಹುಡುಕುತ್ತಾ ಬಂದಿತು. ಕೋಳಿ ಅಂಗಡಿಯ ಮಾಲೀಕರು ಕಾಗೆಯನ್ನು ಕಂಬಕ್ಕೆ ಹಗ್ಗದಿಂದ ಕಟ್ಟುತ್ತಾರೆ. ಇದರಿಂದ ಕಾಗೆ ಜೋರಾಗಿ ಕಿರುಚುತ್ತದೆ.
ಕಾಗೆಯನ್ನು ಹಿಡಿದಾಗ, ನೂರಾರು ಕಾಗೆಗಳು ಸ್ಥಳಕ್ಕೆ ಹಿಂಡು ಹಿಂಡಾಗಿ ಬರಲು ಪ್ರಾರಂಭಿಸುತ್ತವೆ. ಉಳಿದ ಅಂಗಡಿಯವರು ಕಾಗೆಯ ಕೂಗು ತಾಳಲಾರದೆ ಕಾಗೆಯನ್ನು ಬಿಟ್ಟುಬಿಡುತ್ತಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
కాకి అరిచి విసిగిస్తుందని తాడుతో కట్టేసిన ఓ చికెన్ షాప్ యజమాని
అంబేద్కర్ కోనసీమ జిల్లా తాటిపాక డైలీ మార్కెట్లో ఒక కాకి అరిచి విసిగిస్తుందని దాన్ని ఓ చికెన్ షాప్ యజమాని తాడుతో కట్టేశాడు.. అయితే కాకిని బంధించడంతో అక్కడకు వందలాది కాకులు చేరుకుని అరవడం మొదలెట్టాయి.
కాకుల గోలను… pic.twitter.com/08GzAC94px
— Telugu Scribe (@TeluguScribe) July 17, 2024