ಶೂ ಒಳಗೆ ಕಾಲು ಹಾಕುತ್ತಿದ್ದಂತೆ ಹೆಡೆ ಎತ್ತಿ ಎಂಟ್ರಿ ಕೊಟ್ಟ ಬುಸ್ ಬುಸ್ ನಾಗಪ್ಪ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಳೆಗಾಲದಲ್ಲಿ ಹಾವುಗಳು ಹೆಚ್ಚಾಗಿ ಮನೆಗೆ ನುಗ್ಗುತ್ತವೆ. ಮಳೆ ಅಥವಾ ಪ್ರವಾಹದಿಂದಾಗಿ ಹಾವುಗಳು ಹೆಚ್ಚಾಗಿ ಮನೆಗಳಿಗೆ ನುಗ್ಗುತ್ತವೆ. ಆದ್ದರಿಂದ ಮಳೆಗಾಲದಲ್ಲಿ ಶೂ, ಹೆಲ್ಮೆಟ್ ಮತ್ತು ಬಟ್ಟೆಗಳನ್ನು ಧರಿಸುವ ಮುನ್ನ ಎಚ್ಚರಿಕೆಯಿಂದ ಪರಿಶೀಲಿಸುವುದು ಬಹಳ ಮುಖ್ಯ.

ವ್ಯಕ್ತಿಯೊಬ್ಬ ಶೂನಲ್ಲಿ ಕಾಲಿಡಲು ಯತ್ನಿಸಿದಾಗ ನಾಗರ ಹಾವೊಂದು ತಲೆ ಎತ್ತಿರುವ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ವೀಡಿಯೋವನ್ನು sarpmitra_neerajprajapat ಹೆಸರಿನ Instagram ಖಾತೆಯಿಂದ ಹಂಚಿಕೊಳ್ಳಲಾಗಿದೆ. ಜುಲೈ 13 ರಂದು ಪೋಸ್ಟ್ ಮಾಡಲಾದ ಈ ವಿಡಿಯೋ ಕೇವಲ ಐದು ದಿನಗಳಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ಪಡೆದುಕೊಂಡಿದೆ. 792,439 ಇಂಟರ್ನೆಟ್ ಬಳಕೆದಾರರು ಈ ವೀಡಿಯೊವನ್ನು ಇಷ್ಟಪಟ್ಟಿದ್ದಾರೆ.

ವೈರಲ್​​ ಆಗಿರುವ ವಿಡಿಯೋದಲ್ಲಿ ಶೂ ಒಳಗೆ​​ ನಾಗರ ಹಾವು ಬೆಚ್ಚಗೆ ಮಲಗಿರುವುದನ್ನು ಕಾಣಬಹುದು. ಶೂ ಒಳಗಿನಿಂದ ಹಾವು ಬುಸುಗುಟ್ಟುತ್ತಾ ಹೆಡೆ ಎತ್ತಿ ನಿಂತಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!