ಹೊಸದಿಗಂತ ಡಿಜಿಟಲ್ ಡೆಸ್ಕ್:
ರೈತನನ್ನು ಅವಮಾನಿಸಿದ ಹಿನ್ನೆಲೆಯಲ್ಲಿ ಬೆಂಗಳೂರಿನ ಜಿಟಿ ಮಾಲ್ ಏಳು ದಿನಗಳ ಕಾಲ ಬಂದ್ ಮಾಡುವುದಾಗಿ ಸಚಿವ ಭೈರತಿ ಸುರೇಶ್ ಸದನದಲ್ಲಿ ಘೋಷಿಸಿದ್ದಾರೆ.
ಬಹುತೇಕ ಶಾಸಕರು ಮಾಗಡಿ ರಸ್ತೆಯಲ್ಲಿರುವ ಜಿಟಿ ಮಾಲ್ ಮುಚ್ಚುವಂತೆ ಒತ್ತಾಯಿಸುತ್ತಿರುವುದರಿಂದ ಏಳು ದಿನಗಳ ಕಾಲ ಜಿಟಿ ಮಾಲ್ ಬಂದ್ ಮಾಡುತ್ತೇವೆ.
ಈ ಬಗ್ಗೆ ಈಗಾಗಲೇ ಬಿಬಿಎಂಪಿ ಆಯುಕ್ತರೊಂದಿಗೆ ಮಾತನಾಡಿದ್ದು, ಕಾನೂನಿನಲ್ಲಿ ಈ ಬಗ್ಗೆ ಅವಕಾಶವಿದೆ ಎಂದು ಸಚಿವ ಭೈರತಿ ಸುರೇಶ್ ಸದನದಲ್ಲಿ ಹೇಳಿದರು.