ದಿಗಂತ ವರದಿ ಹಾವೇರಿ:
ಸಾಮಾಜಿಕ ಜಾಲತಾಣದಲ್ಲಿ ದರ್ಗಾ ಮೇಲೆ ಶ್ರೀರಾಮನ ಭಾವಚಿತ್ರ ಹಾಕಿ ಪ್ರಸಾರ ಮಾಡಿದ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲೆ ರಾಣೆಬೇನ್ನೂರು ನಗರದಲ್ಲಿ ಬುಧವಾರ ತಡರಾತ್ರಿ ಗಲಾಟೆ ನಡೆದು ಯುವಕನೊಬ್ಬನನ್ನು ಬಂಧಿಸಿದ ಘಟನೆ ನಡೆದಿದೆ.
ರಾಣೆಬೇನ್ನೂರ ಜಮಾಲಶ್ಯಾವಲಿ ದರ್ಗಾದ ಮೇಲೆ ಶ್ರೀರಾಮ್ ಪೋಟೋ ಇಟ್ಟು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಕಿಡಗೇಡಿಯೊಬ್ಬ ಹರಿಬಿಟ್ಟಿದ್ದು ಈ ಕುರಿತು ಮುಸ್ಲಿಂ ಸಮಾಜದವರು ದೂರು ಸಲ್ಲಿಸಿದ್ದಾರೆ. ಸಮಾಜದ ಶಾಂತಿಗೆ ಧಕ್ಕೆ ತಂದ ಹಿನ್ನೆಲೆಯಲ್ಲಿ ನಯನ ಕಿಟ್ಟದ ಎಂಬ ಇನ್ ಸ್ಟಾಗ್ರಾಮನಲ್ಲಿ ಶೇರ್ ಮಾಡಿದ ಕಿಡಗೇಡಿಯನ್ನು ಪೊಲೀಸರು ಬಂಧಿಸಿದ್ದಾರೆ.
ಈ ಹಿನ್ನೆಲೆ ಕೋಪಗೊಂಡ ಉಭಯ ಕೋಮಿನ ಸಮುದಾಯದ ಮುಖಂಡರ ಮಧ್ಯ ಮಾತಿನ ಚಕಮಕಿ ನಡೆದು ಗಲಾಟೆ ಹಿನ್ನೆಲೆಯಲ್ಲಿ ಕೊಂಚ ಕಾಲ ಉದ್ವಿಗ್ನತೆ ಕಂಡು ಬಂತು. ಹಾವೇರಿ ಎಸ್ಪಿ ಅಂಶುಕುಮಾರ್ ಸ್ಥಳಕ್ಕೆ ಬೇಟಿ ಪರಿಶೀಲನೆ ನಡೆಸಿದ್ದಾರೆ.
ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ. ರಾಣೆಬೇನ್ನೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಹೆಚ್ಚುವರಿ ಎಸ್ಪಿ ಸಿ.ಗೋಪಾಲ ಮಾಹಿತಿ ನೀಡಿದ್ದಾರೆ.