ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚೆಗಷ್ಟೇ ನಡೆದ ಅನಂತ್ ಅಂಬಾನಿ ಮದುವೆಯಲ್ಲಿ ಸೆಲೆಬ್ರಿಟಿಗಳು ಜೋರಾಗಿಯೇ ಮಿಂಚಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಇದರ ವಿಡಿಯೋ ವೈರಲ್ ಆಗಿದೆ, ಆದರೆ ಎಲ್ಲಿಯೂ ಏನೆಲ್ಲಾ ಊಟ ಇತ್ತು ಅನ್ನೋ ವಿಡಿಯೋಗಳಿಲ್ಲ. ಏನಿತ್ತು ಊಟದ ಮೆನ್ಯು ನೋಡಿ..
ಅಂಬಾನಿ ಕುಟುಂಬ ತಮ್ಮ ಗೌರವಾನ್ವಿತ ಅತಿಥಿಗಳಿಗೆ ರಾಜಮನೆತನಕ್ಕೆ ಯೋಗ್ಯವಾದ ಔತಣವನ್ನು ಉಣಬಡಿಸಿದೆ. ಸಾಂಪ್ರದಾಯಿಕ ಭಾರತೀಯ ಆಹಾರದ ಜೊತೆ ವಿದೇಶಿ ಪಾಕಪದ್ಧತಿಗಳ ರುಚಿ ಸವಿಯುವ ಅವಕಾಶ ಅತಿಥಿಗಳಿಗೆ ದೊರಕಿತ್ತು.25 ಸಾವಿರಕ್ಕೂ ಹೆಚ್ಚು ವೆರೈಟಿ ಖಾದ್ಯಗಳನ್ನು ಇಲ್ಲಿ ಬಡಿಸಲಾಯ್ತು.
ಮದುವೆಯಲ್ಲಿ ವಾರಣಾಸಿಯ ಅತ್ಯಂತ ಪ್ರಸಿದ್ಧ ತಿನಿಸುಗಳಲ್ಲಿ ಒಂದಾದ ಕಾಶಿ ಚಾಟ್ ಭಂಡಾರ್ ನ ಆಲೂ ಟಿಕ್ಕಿ, ಟೊಮೆಟೊ ಚಾಟ್, ಚನಾ ಕಚೋರಿ, ಪಾಲಕ್ ಚಾಟ್ ಮತ್ತು ಕುಲ್ಫಿಯಂತಹ ಕೆಲವು ಸಹಿ ಭಕ್ಷ್ಯಗಳನ್ನು ಉಣಬಡಿಸಲಾಯ್ತು. ಕಾಶಿಗೆ ಹೋಗಿ ಅಲ್ಲಿನ ಚಾಟ್ ರುಚಿ ನೋಡಿ ಬಂದ ನಂತ್ರ ನೀತಾ ಅಂಬಾನಿ ಈ ಚಾಟ್ ಗಳನ್ನು ತಮ್ಮ ಮೆನುವಿನಲ್ಲಿ ಸೇರಿಸಿದ್ದರು.
ಮದುವೆಯಲ್ಲಿ ಆಕರ್ಷಣೆಯ ಕೇಂದ್ರಬಿಂದುವಾಗಿದ್ದ ಮತ್ತೊಂದು ಚಾಟ್ ಇಂದೋರ್‌ನ ಗರಡು ಚಾಟ್. ಇದು ಮಸಾಲೆಯುಕ್ತ ಮತ್ತು ಕಟುವಾದ ಚಾಟ್ ಆಗಿದ್ದು, ಇಂದೋರ್ ನಲ್ಲಿ ಪ್ರಸಿದ್ಧಿ ಪಡೆದಿದೆ.
ಅಂತರಾಷ್ಟ್ರೀಯ ಅತಿಥಿಗಳಿಗಾಗಿ ಮುಖೇಶ್ ಅಂಬಾನಿ ಇಂಡೋನೇಷಿಯಾದ ಕಂಪನಿಯ ಸೇವೆಯನ್ನು ತೆಗೆದುಕೊಂಡಿದ್ದರು. ವಿದೇಶಿ ಅತಿಥಿಗಳಿಗೆ ಅಗತ್ಯವಿರುವ ಆಹಾರವನ್ನು ಅವರು ತಯಾರಿಸಿದ್ದರು. ತೆಂಗಿನಕಾಯಿಯಿಂದ ಮಾಡಿದ 100ಕ್ಕೂ ಹೆಚ್ಚು ಖಾದ್ಯಗಳನ್ನೂ ಮದುವೆಯಲ್ಲಿ ತಯಾರಿಸಲಾಗಿತ್ತು. ಅತಿಥಿಗಳಿಗಾಗಿ ಚೀಸ್ ವೀಲ್ ಪಾಸ್ತಾ ಲಭ್ಯವಿತ್ತು.
ಮೆನುವಿನಲ್ಲಿ ಮತ್ತೊಂದು ಗಮನಾರ್ಹ ಸೇರ್ಪಡೆಯೆಂದರೆ ಮದ್ರಾಸ್‌ನ ಪ್ರಸಿದ್ಧ ಫಿಲ್ಟರ್ ಕಾಫಿ. ಇದನ್ನು ಮದ್ರಾಸ್ ಕಾಫಿ, ಕುಂಭಕೋಣಂ ಕಾಫಿ, ಮೈಲಾಪುರ ಕಾಫಿ ಮತ್ತು ಮೈಸೂರು ಫಿಲ್ಟರ್ ಕಾಫಿ ಎಂದೂ ಕರೆಯಲಾಗುತ್ತದೆ. ಊಟದ ಜೊತೆ ಬನಾರಸಿ ಪಾನ್ ವ್ಯವಸ್ಥೆ ಕೂಡ ಮಾಡಲಾಗಿತ್ತು.
Very nice food enjoy all people who come there. Enjoy you marriage life.