ದಿಗಂತ ವರದಿ ಕುಮಟಾ :
ತಾಲೂಕಿನ ಬರ್ಗಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಪಕ್ಕ ಇರುವ ಬೃಹತ್ ಗಾತ್ರದ ಗುಡ್ಡ ಕುಸಿದು ರಸ್ತೆ ಯಲ್ಲಿ ಬಿದ್ದಿದ್ದು ಸಂಚಾರ ಅಸ್ತವ್ಯಸ್ತವಾಗಿದೆ.
ಕುಸಿತ ಇನ್ನೂ ನಿಲ್ಲದೇ, ಮೆಲ್ಬಾಗದಿಂದ ಕುಸಿಯುವ ಸಾಧ್ಯತೆ ಇದ್ದು ಮುನ್ನಚ್ಚರಿಕೆ ಹಿನ್ನೆಲೆ ಯಲ್ಲಿ ಒಂದು ಕಡೆ ರಸ್ತೆ ಸಂಚಾರ ಬಂದ್ ಮಾಡಲಾಗಿದೆ .ಆಯ್ ಆರ್ ಬಿ ರವರಿಂದ ಮಣ್ಣು ತೆಗೆಯುವ ಕಾರ್ಯ ಪ್ರಗತಿಯಲ್ಲಿ ಇದೆ. ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿಗಳು ಸಂಚಾರ ಸುಗಮಗೊಳಿಸುತ್ತಿದ್ದಾರೆ.