ದಿಗಂತ ವರದಿ ಅಂಕೋಲಾ:
ಶಿರೂರು ಸಮೀಪ ಗುಡ್ಡ ಕುಸಿತದಲ್ಲಿ ಮೃತಪಟ್ಟ ಟ್ಯಾಂಕರ್ ಚಾಲಕ ತಮಿಳುನಾಡು ಮೂಲದವ ಎಂದು ಪತ್ತೆಯಾಗಿದೆ. ತಮಿಳುನಾಡಿನ ನಾಮಕ್ಕಲ್ ನ ಚಿಣ್ಣನ್ ಎಂಬುವವನಾಗಿದ್ದು ಟ್ಯಾಕರ್ ಮೂಲಕ ಮಂಗಳೂರಿನಿಂದ ಗೋವಾ ಗೆ ತೆರಳುತ್ತಿದ್ದ. ಈತನ ಶವ ಗೋಕರ್ಣ ಸಮೀಪ ಬೇಲೆಹಿತ್ತಲ ಗಂಗಾವಳಿ ತಟದಲ್ಲಿ ಪತ್ತೆಯಾಗಿತ್ತು.
ಇವರ ಕುಟುಂಬದವರಿಗೆ ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯ 5 ಲಕ್ಷ ರೂ.ಪರಿಹಾರದ ಆದೇಶ ಪತ್ರ ವಿತರಿಸಿ ಸಾಂತ್ವನ ಹೇಳಿದರು.